ಲೇಡಿಹಿಲ್ ವಿಕ್ಟೋರಿಯಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್(ಕ್ಯಾಬಿನೆಟ್ ) ಉದ್ಘಾಟನೆ

0
27

ಮಂಗಳೂರು: ಲೇಡಿಹಿಲ್ ವಿಕ್ಟೋರಿಯಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ 04 ಜುಲೈ 2025 ರಂದು ಪೂರ್ವಾಹ್ನ 10 ಗಂಟೆಗೆ ಸರಿಯಾಗಿ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿ ಪರಿಷತ್(ಕ್ಯಾಬಿನೆಟ್ ) ನ ಉದ್ಘಾಟನೆ ಮತ್ತು ಪ್ರಮಾಣ ವಚನ ಸಮಾರಂಭವನ್ನು ವಿಜೃಂಭಣೆಯಿಂದ ನಡೆಸಲಾಯಿತು. ಈ ಸಮಾರಂಭದ ಮುಖ್ಯ ಅತಿಥಿಯಾಗಿ ಗೀತಾ ಕುಲ್ಕರ್ಣಿ, ಸಹಾಯಕ ಪೊಲೀಸ್ ಆಯುಕ್ತರು (ACP), ನಗರ ಅಪರಾಧ ದಾಖಲೆ ಬ್ಯೂರೋ (CCRB)ಮಂಗಳೂರು. ಅವರು ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ, ಲೇಡಿಹಿಲ್ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಭಗಿನಿ. ಮಾರಿಯಾ ಕೃಪಾ ಎ.ಸಿ, ಹಳೆಯ ವಿದ್ಯಾರ್ಥಿನಿಯರ ಸಂಘದ ಉಪಾಧ್ಯಕ್ಷೆ ಕುಮಾರಿ. ರಿಶೆಲ್ ಬ್ರೆಟ್‌ನಿ ಫರ್ನಾಂಡಿಸ್, ಪ್ರಾಂಶುಪಾಲೆ ಭಗಿನಿ. ಶರ್ಮಿಳಾ ಎ.ಸಿ, ಕಾಲೇಜು ಸಂಯೋಜಕಿ ಸೀಮಾ ಶೇಖ್, ಸಿಬ್ಬಂದಿ ಸಂಚಾಲಕಿ ಶ್ರೀಮತಿ ರಿತಿನ್ ಜಾಯ್ಲಿನ್ ಡಿ ಆಲ್ಮೆಡಾ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ವಿದ್ಯಾರ್ಥಿಗಳು ಸಂಭ್ರಮದ ಸ್ವಾಗತ ನೃತ್ಯ ಪ್ರದರ್ಶಿಸಿ ಸಭಿಕರಿಗೆ ಉತ್ಸಾಹ ತುಂಬಿದರು. ರಸಾಯನಶಾಸ್ತ್ರ ಉಪನ್ಯಾಸಕಿ ಶ್ರೀಮತಿ.ರೀಮಾ ಮರೀನಾ ಒರ್ನೆಲ್ಲೊ ಅವರು ಸಮಾರಂಭಕ್ಕೆ ಸ್ವಾಗತ ಭಾಷಣ ನೀಡಿದರು.

ಅತಿಥಿಗಳಿಂದ ದೀಪ ಪ್ರಜ್ವಲನೆಯು ನೆರವೇರಿಸಲಾಯಿತು. ಬಳಿಕ ಪ್ರಾಂಶುಪಾಲೆ ಭಗಿನಿ ಶರ್ಮಿಳಾ ಎ.ಸಿ ಮತ್ತು ಅತಿಥಿಯವರನ್ನು  ವಿದ್ಯಾರ್ಥಿ ಪರಿಷತ್ ಸದಸ್ಯರು ವೇದಿಕೆಗೆ ಕರೆ ತಂದರು. ಬಳಿಕ ಕಾಲೇಜಿನ ಧ್ವಜಾರೋಹಣದ ಮೂಲಕ 2025–26ನೇ ಸಾಲಿನ ವಿದ್ಯಾರ್ಥಿ ಪರಿಷತ್‌ ಗೆ ಅಧಿಕೃತ ಚಾಲನೆ ನೀಡಲಾಯಿತು.

ಬೆಳಕಿನ ಹಸ್ತಾಂತರದ ಮೂಲಕ  ಭಗಿನಿ. ಶರ್ಮಿಳಾ ಎ.ಸಿ ಅವರು  ಹೊಸ ಸಚಿವೆಯರಿಗೆ ಪ್ರಮಾಣ ವಚನವನ್ನು ಬೋಧಿಸಿದರು ನಂತರ ವಿದ್ಯಾರ್ಥಿಗಳು ತಮ್ಮ ಕರ್ತವ್ಯಗಳನ್ನು ಘೋಷಿಸಿದರು ಹಾಗೂ ಭಗಿನಿ.ಮಾರಿಯಾ ಕೃಪಾ ಎ.ಸಿ ಮತ್ತು ಪ್ರಾಂಶುಪಾಲೆ ಭಗಿನಿ. ಶರ್ಮಿಳಾ ಎ.ಸಿ ಅವರಿಂದ ಬ್ಯಾಡ್ಜ್‌ಗಳನ್ನು ಸ್ವೀಕರಿಸಿದರು.

 ACP ಗೀತಾ ಕುಲ್ಕರ್ಣಿ ಅವರು ವಿದ್ಯಾರ್ಥಿಗಳಿಗೆ ಕವಚಗಳನ್ನು ಧರಿಸಿ ಗೌರವಿಸಿದರು. ACP ಗೀತಾ ಕುಲ್ಕರ್ಣಿ ಅವರು ವಿದ್ಯಾರ್ಥಿಗಳಿಗೆ ಪ್ರಾರ್ಥನೆಯ ಮಹತ್ವ ಮತ್ತು ಶಿಸ್ತಿನ ಕುರಿತು ಮಾತನಾಡಿ, ನಾಯಕತ್ವದ ತಾತ್ಪರ್ಯ ಅಧಿಕಾರವಲ್ಲ, ಸೇವೆಯಲ್ಲಿದೆ ಎಂಬುದನ್ನು ತೋರಿದರು. ಅವರು ಮೂರು ಪ್ರಮುಖ ಸಲಹೆಗಳನ್ನು ನೀಡಿದರು.

1. ಸೈಬರ್ ಅಪರಾಧಗಳಿಂದ ದೂರವಿರುವುದು.

2. ವೈಯಕ್ತಿಕ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಿರುವುದು.

3. ಅನಾಮಧೇಯ ಲಿಂಕ್‌ಗಳನ್ನು ಕ್ಲಿಕ್ ಮಾಡದಿರುವುದು.  

ಸಿಸ್ಟರ್ ಮಾರಿಯಾ ಕೃಪಾ ಎ.ಸಿ ಅವರು ನೂತನ ಸದಸ್ಯರಿಗೆ ಹಾರ್ದಿಕ ಅಭಿನಂದನೆ ಸಲ್ಲಿಸಿ, ಅವರಲ್ಲಿ ನಾಯಕತ್ವ ಮತ್ತು ಜವಾಬ್ದಾರಿ ಸ್ಪೂರ್ತಿ ತುಂಬಿದರು.

ಆಸಿಯಾ ಫಾಲಕ್ (ದ್ವಿತೀಯ ಪಿಯು ವಿಜ್ಞಾನ) ವಂದಿಸಿದರು, ಅಹನಾ ಪಿ.ಎಸ್ (ದ್ವಿತೀಯ ಪಿಯು ವಿಜ್ಞಾನ)  ನಿರೂಪಿಸಿದರು.

ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ  ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here