ಬನ್ನಡ್ಕ ಶಾರದೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಚಪ್ಪರ ಮುಹೂರ್ತ

0
244

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

ಬನ್ನಡ್ಕ ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿಯ ವತಿಯಿಂದ ನಾಲ್ಕನೇ ವರ್ಷದ ಸಾರ್ವಜನಿಕ ಶಾರದಾ ಮಹೋತ್ಸವ ಆಮಂತ್ರಣ ಪತ್ರಿಕೆಯ ಬಿಡುಗಡೆ ಹಾಗೂ ಚಪ್ಪರ ಮುಹೂರ್ತ ಸಪ್ಟಂಬ‌ರ್ 7ರಂದು ಶ್ರೀ ಕ್ಷೇತ್ರ ಬನ್ನಡ್ಕದಲ್ಲಿ ನಡೆಯಿತು. ಅಕ್ಟೋಬ‌ರ್ ಒಂದು ಮತ್ತು ಎರಡರಂದು ನಡೆಯಲಿರುವ ಶಾರದಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಮಾರ್ನಾಡು ಅನಂತ ಅಸ್ರಣ್ಣರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಬನ್ನಡ್ಕದ ಆಡಳಿತ ಮೊಕ್ತೇಸರ ಸುಕುಮಾರ್ ಬಲ್ಲಾಳ್, ಶಾರದಾ ಸಮಿತಿಯ ಅಧ್ಯಕ್ಷ ಎಂ ದಯಾನಂದ ಪೈ, ಎಸ್ ಕೆ ಎಫ್ ನ ಪ್ರಜ್ವಲ್ ಆಚಾರ್ಯ, ಉತ್ಸವದ ಆಡಳಿತ ಮಂಡಳಿಯ ಪದಾಧಿಕಾರಿಗಳು ಕಾರ್ಯಕಾರಿಣಿ ಸಮಿತಿಯ ಸದಸ್ಯರುಗಳು, ಮಹಿಳಾ ಸದಸ್ಯರು ಹಾಗೂ ಊರ ಹಿರಿಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here