ಮೂಡುಬಿದಿರೆ: ಮಾದಕ ವಸ್ತುಗಳು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಅಂತಹ ಎಲ್ಲ ಮಾದಕ ವಸ್ತುಗಳ ದುಶ್ಚಟದಿಂದ ಮನುಷ್ಯರು ವ್ಯಸನ ಮುಕ್ತರಾಗಿ ಬದುಕನ್ನು ನಡೆಸಬೇಕು. ಯಾರೇ ಮಾದಕ ವಸ್ತು ವ್ಯಸನಿಗಳ ಬಗ್ಗೆ ತಿಳಿದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿಯನ್ನು ನೀಡಿ ಅವರನ್ನು ವ್ಯಸನ ಮುಕ್ತರಾಗಿ, ದೂರವಿರುವಂತೆ ಪ್ರೇರೇಪಿಸಲು ಪ್ರಯತ್ನಿಸಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್, ತಹಸೀಲ್ದಾರ್ ಶ್ರೀಧರ್ ಎಂ, ಮುಖ್ಯಾಧಿಕಾರಿ ಇಂದು ಎಂ, ಕನ್ನಡ ಸಮಿತಿಯ ರಾಜೇಶ್ ಕಡಲ ಕೆರೆ, ಹಾಗೂ ಇತರರು ಆಶಿಸಿದರು.

ಮೇಲ್ಕಂಡವರು ಮೂಡುಬಿದಿರೆ ತಾಲೂಕು ಕಚೇರಿಯಲ್ಲಿ ನಡೆದ ಡಾ. ಮಹಾಂತ ಶಿವಯೋಗಿ ಸ್ವಾಮೀಜಿ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಉಪತಹಸಿಲ್ದಾರ ರಾಮ ಎಂ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ವರದಿ ರಾಯಿ ರಾಜ ಕುಮಾರ್

