ಬಿಸಿರೋಡ್ ಯುವತಿ ಹತ್ಯೆ ಪ್ರಕರಣ: ಹಿಂದು ಜಾಗರಣ ವೇದಿಕೆ ತೀವ್ರ ಖಂಡನೆ

0
13


ಮಂಗಳೂರು: ಇಂದು ಸಂಜೆ ಬಿಸಿ ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ನಡೆದ 23 ವರ್ಷದ ಲಾವಣ್ಯ (ಮೂಲತಃ ಕಕ್ಕೆಪದವು ನಿವಾಸಿ) ಅವರ ಹತ್ಯೆ ಪ್ರಕರಣವನ್ನು ಹಿಂದು ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದೆ. ಪ್ರಕರಣದ ಕುರಿತು ಸಂಘಟನೆಯು ಪ್ರಕಟಣೆ ಹೊರಡಿಸಿದೆ. �
Facebook
ಸಮಾಜದಲ್ಲಿ ಇಂತಹ ಅಮಾನುಷ ಹಾಗೂ ಕ್ರೂರ ಕೃತ್ಯಗಳಿಗೆ ಯಾವುದೇ ಸ್ಥಾನವಿಲ್ಲ. ಯುವತಿಯೊಬ್ಬಳ ಅಮೂಲ್ಯ ಜೀವವನ್ನು ಬಲಿತೆಗೆದುಕೊಂಡಿರುವ ಈ ಘಟನೆ ಅತ್ಯಂತ ದುಃಖಕರವಾಗಿದ್ದು, ಸಾರ್ವಜನಿಕರಲ್ಲಿ ಆತಂಕವನ್ನು ಉಂಟುಮಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಕರಣದ ಸಂಪೂರ್ಣ ತನಿಖೆಯನ್ನು ಪೊಲೀಸರು ಶೀಘ್ರಗತಿಯಲ್ಲಿ ನಡೆಸಿ, ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಮೃತ ಯುವತಿಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಹಿಂದು ಜಾಗರಣ ವೇದಿಕೆ ಆಗ್ರಹಿಸಿದೆ.
ಮೃತ ಲಾವಣ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸಲಾಗಿದೆ.
ಈ ಪ್ರಕಟಣೆಯನ್ನು ಹಿಂದು ಜಾಗರಣ ವೇದಿಕೆ, ಮಂಗಳೂರು ಗ್ರಾಮಾಂತರ ಜಿಲ್ಲೆಯ ಸಂಯೋಜಕರಾದ ನರಸಿಂಹ ಮಾಣಿ ತಿಳಿಸಿದ್ದಾರೆ.