ಬಂಟ್ವಾಳ: ಇಲ್ಲಿನ ಸ್ವಾತಂತ್ರö್ಯ ಹೋರಾಟಗಾರ ದಿವಂಗತ ಡಾ.ಅಮ್ಮೆಂಬಳ ಬಾಳಪ್ಪ ಮತ್ತು ಹೂವಪ್ಪ ಅವ ಅವರ ನೇತೃತ್ವದಲ್ಲಿ ಆರಂಭಗೊAಡ ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘವು ಕಳೆದ ಸಾಲಿನಲ್ಲಿ ಒಟ್ಟು ರೂ 1,159 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ, ಸುಮಾರು ರೂ. 5.05 ಕೋಟಿ (ತಾತ್ಕಾಲಿಕ) ಲಾಭ ಗಳಿಸಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭೋಜ ಮೂಲ್ಯ ಹೇಳಿದ್ದಾರೆ.
ಬಂಟ್ವಾಳದಲ್ಲಿ ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ ಪ್ರಸಕ್ತ 16 ಶಾಖೆಗಳನ್ನು ಹೊಂದಿರುವ ಸಂಘವು ಅವಿಭಜಿತ ಜಿಲ್ಲೆ ಕಾರ್ಯ ವ್ಯಾಪ್ತಿ ಹೊಂದಿದೆ. ಸಂಘದ ಪುಂಜಾಲಕಟ್ಟೆ, ಮುಡಿಪು ಮತ್ತು ಉಪ್ಪಿನಂಗಡಿ ಶಾಖೆಯು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಮೆಲ್ಕಾರ್ ಶಾಖೆಗೆ ಸ್ವಂತ ಕಟ್ಟಡ ನಿರ್ಮಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ’ ಎಂದರು. ಬಂಟ್ವಾಳ ಬೈಪಾಸ್ ಶಾಖೆಯಲ್ಲಿ ಇ-ಸ್ಟ್ಯಾಂಪ್ ಸೌಲಭ್ಯ, ಕೆಲವೆಡೆ ್ಲ ಸೇಫ್ ಲಾಕರ್ ಸೌಲಭ್ಯವೂ ಇದೆ. ಮಣಿಪಾಲ ಆರೋಗ್ಯ ಕಾರ್ಡ್, ಸದಸ್ಯರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿ ವೇತನ, ಯಶಸ್ವಿನಿ ಆರೋಗ್ಯ ಕಾಡ್ ð ಸೌಲಭ್ಯ, ಸದಸ್ಯರು ಗಂಭೀರ ಕಾಯಿಲೆಗೆ ತುತ್ತಾದ ವೇಳೆ ಆರ್ಥಿಕ ಸಹಾಯಧನ ನೀಡಲಾಗುತ್ತಿದ್ದು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ 3 ಬಾರಿ ಸಾಧನಾ ಪ್ರಶಸ್ತಿ ನೀಡಿದೆ ಎಂದು ಅವರು ತಿಳಿಸಿದರು.
ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ಮಾತನಾಡಿ, ‘ವಾಮಂಜೂರಿನಲ್ಲಿ ನೂತನ ಶಾಖೆ ತೆರೆಯುವ ಬಗ್ಗೆ ಈಗಾಗಲೇ ಆಡಳಿತ ಸಮಿತಿ ನಿರ್ಧರಿಸಿದ್ದು, ಈ ಬಾರಿ ಆಡಳಿತ ಸಮಿತಿ ಚುನಾವಣೆ ನಡೆದ ಹಿನ್ನೆಲೆಯಲ್ಲಿ ಕಳೆದ ಬಾರಿಗಿಂತ ಲಾಭಾಂಶದಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸ ಆಗಿದೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಜನಾರ್ಧನ ಬೊಂಡಾಲ, ಸದಸ್ಯರಾದ ಅರುಣ್ ಕುಮಾರ್, ಅರುಣ್ ಬೋರುಗುಡ್ಡೆ, ಹರೀಶ್ ಜಾರಬೆಟ್ಟು, ಜಗನ್ನಿವಾಸ್ ಗೌಡ, ರಮೇಶ್ ಸಾಲಿಯಾನ್, ಮಾಲತಿ ಮಚ್ಚೇಂದ್ರ,ಭೋಜ ಸಾಲಿಯಾನ್, ಕಿರಣ್ ಅಟ್ಲೂರು, ಪ್ರೇಮನಾಥ್ ಬಂಟ್ವಾಳ, ಸತೀಶ್ ಪಲ್ಲಮಜಲು ಇದ್ದರು.