ಬಂಟ್ವಾಳ: ತಾಲ್ಲೂಕಿನ ಕೇಂದ್ರ ಭಾಗವಾಗಿ ಗುರುತಿಸಿಕೊಂಡ ಬಿ.ಸಿ.ರೋಡು ರಾಷ್ಟಿçÃಯ ಹೆದ್ದಾರಿ ಬಳಿ ರೂ 1.60 ಕೋಟಿ ವೆಚ್ಚದಲ್ಲಿ ಪುನರ್ ನವೀಕರಣಗೊಂಡ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಮಾರ್ಗದರ್ಶನದಲ್ಲಿ ಏ.4ರಿಂದ 9ರತನಕ ದೇವರ ವಿಗ್ರಹ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ಸಂಭ್ರಮ ಸಡಗರದಿಂದ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ರಮೇಶಾನಂದ ಸೋಮಯಾಜಿ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಏ.3ರಂದು ಮಧ್ಯಾಹ್ನ 2 ಗಂಟೆಗೆ ಬಿ.ಸಿ.ರೋಡು ಪೊಳಲಿ ದ್ವಾರ ಬಳಿಯಿಂದ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ವಿವಿಧ ಭಜನಾ ತಂಡಗಳು ಮತ್ತು ಕೇರಳ ಚೆಂಡೆ ಸಹಿತ ಬ್ಯಾಂಡ್, ವಾದ್ಯ, ಗೊಂಬೆ ಕುಣಿತ ವಿಶೇಷ ಮೆರುಗು ನೀಡಲಿದೆ’ ಎಂದರು.
ಸಮಿತಿ ಕಾರ್ಯಾಧ್ಯಕ್ಷ ಬಿ.ಸಂಜೀವ ಪೂಜಾರಿ ಬಿ.ಸಿ.ರೋಡು ಮಾತನಾಡಿ, ‘ಈ ದೇವಸ್ಥಾನದಲ್ಲಿ ಮೂರನೇ ಬಾರಿಗೆ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ವಿವಿಧ ಸ್ವಯಂ ಸೇವಕರ ತಂಡ ಮತ್ತು ಭಜನಾ ತಂಡಗಳು ಬ್ರಹ್ಮಕಲಶೋತ್ಸವದ ಯಶಸ್ವಿಗೆ ಅವಿರತ ಶ್ರಮವಹಿಸುತ್ತಿದ್ದಾರೆ. ಈಗಾಗಲೇ ವಿವಿಧ ಭಜನಾ ತಂಡಗಳು ಪ್ರತಿದಿನ ಸಂಜೆ ಭಜನಾ ಸೇವೆ ನೀಡುತ್ತಿದೆ’ ತಿಳಿಸಿದರು.
ಸಮಿತಿ ಉಪಾಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ ಮಾತನಾಡಿ, ‘ ದೇವಳದ ಎಡಭಾಗ ಗದ್ದೆಯಲ್ಲಿ ಎರಡು ಎಕರೆ ಜಮೀನು ಸಮತಟ್ಟುಗೊಳಿಸಲಾಗಿದ್ದು, ಪ್ರತಿದಿನ ಸುಮಾರು 5ಸಾವಿರ ಮಂದಿ ಭಕ್ತರಿಗೆ ನಿರಂತರ ಅನ್ನಸಂತರ್ಪಣೆ ನಡೆಯಲಿದದ್ದು, ಸ್ಥಳೀಯ ಚಂಡಿಕಾ ಪರಮೇಶ್ವರಿ ಮತ್ತು ಅನ್ನಪೂಣೇಶ್ವರಿ ದೇವಸ್ಥಾನ ಬಳಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಆಡಳಿತ ಸೇವಾ ಸಮಿತಿ ಅಧ್ಯಕ್ಷ ಬಿ.ವಿಶ್ವನಾಥ್, ಬೂಡ ಅಧ್ಯಕ್ಷ ಬೇಬಿ ಕುಂದರ್, ವಕೀಲ ಎಂ.ಅಶ್ವನಿ ಕುಮಾರ್ ರೈ, ಐತ್ತಪ್ಪ ಪೂಜಾರಿ, ಬಿ.ಮೋಹನ್, ಎನ್.ಶಿವಶಂಕರ್, ಕೆ.ನಾರಾಯಣ ಹೆಗ್ಡೆ ಬಿ.ಸಿ.ರೋಡು, ಸತೀಶ್ ಭಂಡಾರಿ ಕುಳತ್ತಬೆಟ್ಟು, ರಾಜೇಶ ಎಲ್.ನಾಯಕ್, ಸತೀಶ ಕುಮಾರ್, ಗೋಪಾಲ ಸುವರ್ಣ, ರಮೇಶ ಸಾಲ್ಯಾನ್, ವಸಂತ ರಾವ್, ಶ್ರೀಧರ ಮಲ್ಲಿ ಮತ್ತಿತರರು ಇದ್ದರು.