ಶಿವಭಕ್ತಿಯ ಸಂಭ್ರಮಕ್ಕೆ ಸಾಕ್ಷಿಯಾದ ಬೆದ್ರ : ಆದಿಯೋಗಿ ಪಲ್ಲಕ್ಕಿ ಉತ್ಸವ, ಕೈಲಾಸ ವಾದ್ಯ ಕಾರ್ಯಕ್ರಮ ಅದ್ಧೂರಿ

0
13

ಮೂಡಬಿದಿರೆಯಲ್ಲಿ ಆದಿಯೋಗಿ ಪಲ್ಲಕ್ಕಿ ಉತ್ಸವ ಹಾಗೂ ಕೈಲಾಸ ವಾದ್ಯ ಕಾರ್ಯಕ್ರಮ ಭಕ್ತಿಭಾವ, ಸಂಭ್ರಮ ಹಾಗೂ ಶಿವನಾಮ ಸ್ಮರಣೆಯೊಂದಿಗೆ ಅದ್ಧೂರಿಯಾಗಿ ನೆರವೇರಿತು. ಬೆದ್ರ ಸೇವಾ ಪ್ರತಿಷ್ಠಾನ (ರಿ.) ಇದರ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಶಿವನ ನಾದ, ಡಮರುಗಳ ಮೊಳಗು ಹಾಗೂ ಕೈಲಾಸ ವಾದ್ಯದ ಭವ್ಯ ಸಂಗೀತದೊಂದಿಗೆ ನಡೆದ ಆದಿಯೋಗಿ ಪಲ್ಲಕ್ಕಿ ಉತ್ಸವ ಮೂಡಬಿದಿರೆಯಲ್ಲಿ ವಿಶಿಷ್ಟ ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸಿತು. ಕೈಲಾಸಂ ವಾದ್ಯ ಸೇವೆಯ ಬಳಿಕ ಅದಿಯೋಗಿ ಪಲ್ಲಕ್ಕಿ ಉತ್ಸವವೂ ಶ್ರೀ ಅದಿಶಕ್ತಿ ಮಾರುಗುಡಿಯಿಂದ ಆರಂಭಗೊಂಡು ಹನುಮಾನ್ ದೇವಸ್ಥಾನ ಬಳಿಕ ಜೈನ್ ದೇವಸ್ಥಾನದ ಮಾರ್ಗದಲ್ಲಿ ಸಾಗಿ ಆಲಂಗಾರು ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಸಾಗಿತು.

ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಮೂಡಬಿದಿರೆ ಚೌಟ ವಂಶಸ್ಥರಾದ ಕುಲದೀಪ್ ಎಂ., ಆಳ್ವಾಸ್ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ವಿವೇಕ್ ಆಳ್ವ, ಶ್ರೀ ಕೆ.ಪಿ. ಜಗದೀಶ್ ಅಧಿಕಾರಿ, ಸುದರ್ಶನ ಎಂ., ಹರ್ಷವರ್ಧನ್ ಪಡಿವಾಳ, ಪೂರ್ಣಚಂದ್ರ ಜೈನ್, ಚೇತನ್ ಶೆಟ್ಟಿ, ಪುರಂದರ ದೇವಾಡಿಗ, ಸುರೇಶ್ ಪ್ರಭು, ಸಂದೀಪ್ ಶೆಟ್ಟಿ, ನಾಗರಾಜ್ ಪೂಜಾರಿ, ಗುರು ಒಂಟಿಕಟ್ಟೆ ಹಾಗೂ ದನಕೀರ್ತ ಬಲಿಪ ಅವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕುಲದೀಪ್ ಎಂ. ಅವರು ಆದಿಯೋಗಿ ವಿಗ್ರಹಕ್ಕೆ ಆರತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

ಬೆದ್ರ ಸೇವಾ ಪ್ರತಿಷ್ಠಾನದ  ಸಂಸ್ಥಾಪಕರಾದ ಅಮರ್ ಕೋಟೆ,  ಜವನೇರ್ ಬೆದ್ರ ಸಂಚಾಲಕರಾದ ರಂಜಿತ್ ಶೆಟ್ಟಿ ಹಾಗೂ ಅಬ್ಬಕ್ಕ ಬ್ರಿಗೇಡ್ ಸಂಚಾಲಕಿಯಾದ ಸುನಿತಾ ಉದಯ್ ಅವರು ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಸಂದೀಪ್ ದರೆಗುಡ್ಡೆ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಜವನೇರ್ ಬೆದ್ರ ಹಾಗೂ ಅಬ್ಬಕ್ಕ ಬ್ರಿಗೇಡ್‌ನ ಸದಸ್ಯರು ಮತ್ತು ಈಶ ಸ್ವಯಂಸೇವಕರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

ಆದಿಯೋಗಿಯ ಪಲ್ಲಕ್ಕಿ ಮೆರವಣಿಗೆಯಲ್ಲಿ ಜವನೇರ್ ಬೆದ್ರ ಸಂಸ್ಥೆಯ ಸದಸ್ಯರಾದ ಸುರೇಶ್ ಕಾಯರ್ಗುಂಡಿ, ಮಹೇಶ್, ಅಕ್ಷಯ್ ಕುಮಾರ್, ಶಮಿತ್ ರಾವ್, ಸುದರ್ಶನ್ ಬಂಗೇರ, ಗಣೇಶ್ ಪೈ, ನಾರಾಯಣ ಪಡುಮಲೆ ಹಾಗೂ ರಂಜಿತ್ ಮಿಜಾರ್ ಅವರು ಭಕ್ತಿಭಾವದಿಂದ ಪಲ್ಲಕ್ಕಿಯನ್ನು ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಶಿವನ ಆರಾಧನೆ, ಕೈಲಾಸ ವಾದ್ಯದ ಭವ್ಯ ನಾದ, ಡಮರುಗಳ ಮೊಳಗು ಹಾಗೂ ಆದಿಯೋಗಿಯ ಪಲ್ಲಕ್ಕಿ ಮೆರವಣಿಗೆಯ ಮೂಲಕ ಭಕ್ತರಲ್ಲಿ ಆಧ್ಯಾತ್ಮಿಕ ಚೈತನ್ಯವನ್ನು ತುಂಬಿದ ಈ ಕಾರ್ಯಕ್ರಮ ಮೂಡಬಿದಿರೆಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸ್ಮರಣೀಯ ಕ್ಷಣವಾಗಿ ಮೂಡಿಬಂದಿತು.