ಬೇಸಿಗೆಯಲ್ಲಿ ದೇಹ ತಂಪಾಗಿಡುವ ಬಿಟ್ರೂಟ್ ಮಜ್ಜಿಗೆ: ಮನೆಯಲ್ಲೇ ಸುಲಭವಾಗಿ ತಯಾರಿಸಿ

0
25

ಬೇಸಿಗೆಯ ಬಿಸಿಲಿನಲ್ಲಿ ದೇಹವನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಮಜ್ಜಿಗೆ ಅತ್ಯುತ್ತಮ ಪಾನೀಯಗಳಲ್ಲಿ ಒಂದಾಗಿದೆ. ಇದಕ್ಕೆ ಪೌಷ್ಟಿಕಾಂಶಗಳಿಂದ ಸಮೃದ್ಧವಾದ ಬಿಟ್ರೂಟ್ ಸೇರಿಸಿದರೆ ಇನ್ನಷ್ಟು ಆರೋಗ್ಯಕರ ಪಾನೀಯ ಸಿದ್ಧವಾಗುತ್ತದೆ.

ಬಿಟ್ರೂಟ್‌ನಲ್ಲಿ ಫೋಲೇಟ್, ಕಬ್ಬಿಣಾಂಶ, ಪೊಟ್ಯಾಸಿಯಮ್, ವಿಟಮಿನ್ ಸಿ ಹಾಗೂ ನಾರಿನಾಂಶ ಸಮೃದ್ಧವಾಗಿದ್ದು, ರಕ್ತಹೀನತೆ ನಿವಾರಣೆ, ರಕ್ತದೊತ್ತಡ ನಿಯಂತ್ರಣ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ.

ಮಜ್ಜಿಗೆಯಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ12 ಇದ್ದು, ಜೀರ್ಣಕ್ರಿಯೆ ಸುಧಾರಿಸಿ ದೇಹಕ್ಕೆ ತಂಪು ನೀಡುತ್ತದೆ.

ಬೇಕಾಗುವ ಸಾಮಗ್ರಿಗಳು

  • ಮೊಸರು
  • ಬಿಟ್ರೂಟ್
  • ಶುಂಠಿ
  • ಹಸಿರು ಮೆಣಸಿನಕಾಯಿ
  • ಪುದೀನ ಎಲೆ
  • ಜೀರಿಗೆ ಪುಡಿ
  • ಉಪ್ಪು
  • ಸಾಸಿವೆ
  • ಎಣ್ಣೆ
  • ಕರಿಬೇವು

ತಯಾರಿಸುವ ವಿಧಾನ

ಮೊದಲು ಬಿಟ್ರೂಟ್ ಅನ್ನು ಸ್ವಚ್ಛವಾಗಿ ತೊಳೆದು ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಬೇಕು. ಬಳಿಕ ಕುಕ್ಕರ್‌ನಲ್ಲಿ ನೀರಿನೊಂದಿಗೆ ಹಾಕಿ ಎರಡು ವಿಸಿಲ್ ಬರುವವರೆಗೆ ಬೇಯಿಸಬೇಕು.

ತಣ್ಣಗಾದ ಬಳಿಕ ಬಿಟ್ರೂಟ್ ಜೊತೆ ಶುಂಠಿ, ಪುದೀನ ಎಲೆ ಹಾಗೂ ಹಸಿರು ಮೆಣಸಿನಕಾಯಿ ಸೇರಿಸಿ ನುಣ್ಣಗೆ ರುಬ್ಬಬೇಕು. ನಂತರ ರಸವನ್ನು ಸೋಸಿ ಬೇರ್ಪಡಿಸಬೇಕು.

ಇನ್ನೊಂದು ಪಾತ್ರೆಯಲ್ಲಿ ಮೊಸರು, ನೀರು, ಜೀರಿಗೆ ಪುಡಿ ಮತ್ತು ಉಪ್ಪು ಸೇರಿಸಿ ಮಜ್ಜಿಗೆ ತಯಾರಿಸಬೇಕು. ಬಳಿಕ ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಮಾಡಿ ಮಜ್ಜಿಗೆಗೆ ಸೇರಿಸಬೇಕು.

ಕೊನೆಯಲ್ಲಿ ಬಿಟ್ರೂಟ್ ರಸವನ್ನು ಮಜ್ಜಿಗೆಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿದರೆ ಆರೋಗ್ಯಕರ ಬಿಟ್ರೂಟ್ ಮಜ್ಜಿಗೆ ಸಿದ್ಧವಾಗುತ್ತದೆ.

LEAVE A REPLY

Please enter your comment!
Please enter your name here