ಬೆಳ್ಮಣ್ಣು ತಾಮ್ರಪಟ ಶಾಸನ

0
572

ಕಾರ್ಕಳದಿಂದ ಪಡುಬಿದ್ರೆಗೆ ಹೋಗುವ ರಸ್ತೆಯಲ್ಲಿ ಬೆಳ್ಮಣ್ಣು ಪೇಟೆ ಇದ್ದು ಪೇಟೆಯಿಂದ ಸುಮಾರು 3 ಕಿ.ಮೀ ದೂರ ಒಳಗೆ ಗುಡ್ಡ ಏರಿ ಭತ್ತದ ಬಯಲು ಗದ್ದೆಗಳನ್ನು ದಾಟಿದರೆ ಕಾಣುವ ಎತ್ತರವಾದ ಬೆಟ್ಟ ಕಾನನದ ಮಧ್ಯಭಾಗದಲ್ಲಿ ವಿಶಾಲವಾದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವಿದೆ. ಬೆಳ್ಮಣ್ಣು ಎಂಬ ಕನ್ನಡ ಪದವು ಬೈಲ್ ಮಣ್ಣು ಎಂಬ ಪದದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ..

ಬೆಳ್ಮಣ್ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಕಲ್ಲಿನ ಪೆಟ್ಟಿಗೆಯಲ್ಲಿ ಆಳುವರಸನ ತಾಮ್ರಪಟ ಶಾಸನ ಪತ್ತೆಯಾಗಿದ್ದು ಪಾದೂರು ಗುರುರಾಜ್ ಭಟ್ ಅವರು 1973ರಲ್ಲಿ ಅಧ್ಯಯಸಿ ಪ್ರಕಟಿಸಿರುತ್ತಾರೆ.
ಬೆಳ್ಮಣ್ಣು ಗ್ರಾಮವನ್ನು ಹಿಂದೆ ತುಳುನಾಡಿನ ಆಳುಪ ಮನೆತನವು ಆಳುತ್ತಿದ್ದು ಆ ಮನೆತನದ ಅರಸ ನಾದ ಎರಡನೇ ಆಳುವರಸನ ದಾನ ಶಾಸನವಾಗಿದೆ.ಈ ಶಾಸನ ಕಾಲಮಾನದ ದೃಷ್ಟಿಯಿಂದ ಎಂಟನೇ ಶತಮಾನಕ್ಕೆ ಸೇರಿದ ಶಾಸನವಾಗಿದೆ. ಶಾಸನವು ತಾಮ್ರದ 5 ಪುಟಗಳನ್ನು ಹೊಂದಿದ್ದು 28 ಸಾಲುಗಳನ್ನು ಒಳಗೊಂಡಿದ್ದು ನಾಲ್ಕರಲ್ಲಿ ಬರವಣಿಗೆದ್ದು ಐದನೇದ್ರಲ್ಲಿ ಖಾಲಿ ಇದೆ. ಈ 5 ಪುಟಗಳನ್ನು ಒಟ್ಟಾಗಿ ಜೋಡಿಸಲು ಆಳುಪ ರಾಜ ಮನೆತದ ರಾಜ ಮುದ್ರೆಯಾದ ಅವಳಿ ಮೀನಿನ ಮುದ್ರೆಯೊಂದಿಗೆ ಶಾಸನವನ್ನು ಜೋಡಿಸಲಾಗಿದೆ. ಶಾಸನದ ಆರಂಭವು ಓಂ ನಮಃ ಶಿವಾಯ ಎಂಬ ಶ್ಲೋಕದೊಂದಿಗೆ ಆರಂಭವಾಗಿ 2ನೇಆಳುವರಸರು ಎರೆಯಪ್ಪರಸರೊಂದಿಗೆ ಸೂರ್ಯಗ್ರಹಣದಂದು ಬೆಳ್ಮಣ್ಣು ಸಭೆಗೆ ಉಡುಪಿಯ ಶಿವಳ್ಳಿಗೆ ಕೊಟ್ಟ ಮರ್ಯಾದೆಯನ್ನು ಸರ್ವ ಪರಿಹಾರವಾಗಿ ಪಾಣಿ ಗ್ರಹಣ ಗೈದು ಇದನ್ನು ಕಾಂತಪುರದ (ಈಗಿನ ಕಾಂತಾವರ)ದ ಮಾಣಿದೇವ ಮತ್ತು ಚೊಕ್ಕಪ್ಪಾಡಿಯ ಭಟ್ಟರು ಕೂಡಿಕೊಂಡು ಈ ತಾಮ್ರಪಟ ಶಾಸನವನ್ನು ಕಾಯಿಸಿದರು, ಇದಕ್ಕೆ ಕಾಪುವಿನ ಭೋಗ್ಯವರ್ಮನು ಬೇಳದ (ಈಗಿನ ಬೋಳ) ನಂದನು, ಕುಳನೂರ ನಂದನು,ಸಂತೂರ ಉರಪಣ ಇವರು ಈ ಶಾಸನವನ್ನು ರಕ್ಷಿಸಿದರೆ ಅನನ್ಯ ಅಶ್ವಮೇಧ ಫಲವು ದೊರೆಯುವುದು ಮತ್ತು ಇದನ್ನು ನಾಶ ಮಾಡಿದವರಿಗೆ 60 ವರ್ಷಗಳ ಕಾಲ ಅವರು ಕ್ರಿಮಿಯಾಗಿ ನರಳುವರು ಎಂಬ ಶಾಪವಾಕ್ಯವಿದ್ದು ಶಾಸನವು ಯಸ್ಯ ಯಸ್ಯ ಯಧಾಭೂಮಿ ತಸ್ಯ ತಸ್ಯ ತಧಾ ಫಲಂ ಎಂಬ ವಾಕ್ಯಗಳೊಂದಿಗೆ ಶಾಸನವು ಕೊನೆಗೊಳ್ಳುತ್ತದೆ.
ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಿಯನ್ನು ಅತಿ ನುತಿ ವಿಂಧ್ಯಾವಾಸಿನಿ ಮಾಹಾ ಮುನಿ ಸೇವಿತೆ ಎಂದು ವರ್ಣಿಸಿದ್ದಾರೆ ಮತ್ತು ದಾನ ನೀಡಲಾಗಿದೆ ಎಂಬುದನ್ನು ಬಹಳ ವಿಶೇಷವಾಗಿ ಪಾಣಿ ಗ್ರಹಣ ಗೈದರುಎಂದು ಹೇಳಲಾಗಿದೆ. ಬೆಳ್ಮಣ್ಣು ತಾಮ್ರ ಶಾಸನವು ಸಿರಿ ಆರಾಧನೆಯ ಪರಿಸರಕ್ಕೆ ಸಮೀಪವಾಗಿದ್ದು ಶಾಸನದಲ್ಲಿ ಬ್ರಹ್ಮನಿಂದ ರಕ್ಷಿತನಾದ ಕುಲದಲ್ಲಿ ಅಭಿಮಾನವುಳ್ಳ ಶ್ರೀಮದ್ ಆಳುವರಸ ಎಂದಿದೆ. ಲಭ್ಯವಿರುವ ಶಾಸನಗಳಲ್ಲಿ ಕ ಬೆಳ್ಮಣ್ಣು ತಾಮ್ರಪಟ ಶಾಸನವು ಅತ್ಯಂತ ಪ್ರಾಚೀನ ತಾಮ್ರ ಪಟ ಶಾಸನವಾಗಿದೆ. ಎಂಬುದು ಇತಿಹಾಸದ ಪುಟಗಳಲ್ಲಿ ಸೇರಿಕೊಂಡು ಬೆಳ್ಮಣ್ಣು ಊರಿನ ಮಹತ್ವವನ್ನು ಜಗತ್ತಿನೆಲ್ಲೆಡೆ ಪಸರಿಸಿದೆ ಎಂಬುದರಲ್ಲಿ ಮತ್ತೊಂದು ಮಾತಿಲ್ಲ

  • ದಿಶಾಂತ್ ದೇವಾಡಿಗ – ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ

LEAVE A REPLY

Please enter your comment!
Please enter your name here