ಬೆಳ್ತಂಗಡಿ: ಸಾಧಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹಿಸಿ ಅವರ ಮನೋ ಬಲವನ್ನು ಗಟ್ಟಿಗೊಳಿಸುವ ಕೆಲಸವನ್ನು ಪೃಥ್ವಿ ಜ್ಯುವೆಲ್ಸ್ ಮಾಡುತ್ತಿದೆ. ಕಳೆದ ಹಲವು ವರ್ಷಗಳಿಂದ ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಉತ್ತಮ ವೇದಿಕೆಯನ್ನು ಕಲ್ಪಿಸುವ ಮೂಲಕ ಸಮಾಜಕ್ಕೆ ಈ ಸಂಸ್ಥೆ ಸ್ಫೂರ್ತಿಯಾಗಿದೆ ರಂದು ವೇಣೂರು ಪ್ರೌಢ ಶಾಲಾ ವಿಜ್ಞಾನ ಶಿಕ್ಷಕಿ ಸಂಧ್ಯಾ ಸುಕುಮಾರ್ ಜೈನ್ ಹೇಳಿದರು.
ಸುದ್ದಿ ಉದಯ ವಾರಪತ್ರಿಕೆಯ ಉಪಸಂಪಾದಕ ಸಂತೋಷ್ ಪಿ ಕೋಟ್ಯಾನ್ ಮಾತನಾಡಿ, ಕಳೆದಳು ವರ್ಷಗಳಿಂದ ಪೃಥ್ವಿ ಜುವೆಲ್ಸ್ ಸಂಸ್ಥೆಯು ವಿಶಿಷ್ಟ ಕಾರ್ಯಕ್ರಮಗಳ ಆಯೋಜನೆ ಮೂಲಕ ಪ್ರತಿ ಮನೆ ಮನೆಗೆ ತಲುಪಿದೆ. ಭಾರತೀಯ ವಿಚಾರಧಾರೆ ಮತ್ತು ಭಾವೈಕ್ಯತೆಯ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್ಸಿಯಲ್ಲಿ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಫಾದರ್ ಡೇ ಆಯೋಜಿಸಿದ ಪೋಟೋ ಸ್ಪರ್ದೇಯಲ್ಲಿ ವಿಜೇತರಾದ ಕವಿತೇಶ್ ಇವರನ್ನು ಗೌರವಿಸಲಾಯಿತು. ಸಂಸ್ಥೆಯ ಮ್ಯಾನೇಜರ್ ಅಶೋಕ್ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಿಬ್ಬಂದಿಗಳು ಸಹಕರಿಸಿದರು. ಮಧುಮಿತ್ರ ಬಂಟ್ವಾಳ ನಿರೂಪಿಸಿ ವಂದಿಸಿದರು.
ಸನ್ಮಾನ: ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಸಾಧಕರಾದ ಶರುಣ್ ಡಿಸೋಜ, ತಾನ್ನಿ ಭಟ್ ಎಂ,ಮನಶ್ರೀ, ಸುಪ್ರಿಯ ಎಸ್, ಅರ್ಮಾನ್ ರಿಯಾಜ್, ಅನ್ನಿತಾ ಜೋಸೆಫ್ ಇವರನ್ನು ಸನ್ಮಾನಿಸಲಾಯಿತು.ಮಕ್ಕಳ ಪೋಷಕರು ಉಪಸ್ಥಿತರಿದ್ದರು.