ಬೆಳ್ತಂಗಡಿ : ಉರುವಾಲು ಪದವು ಗ್ರಾಮಕ್ಕೆ ಕುಡಿಯುವ ನೀರಿನ ಸೌಕರ್ಯ – ಹರೀಶ್ ಪೂಂಜಾ ವಿಶೇಷ ಅನುದಾನಕ್ಕೆ ಗ್ರಾಮಸ್ಥರ ಸಂತಸ

0
8

ಬೆಳ್ತಂಗಡಿ ತಾಲೂಕಿನ ಜನಮನ ಗೆದ್ದ, ಅಭಿವೃದ್ಧಿಯ ಹರಿಕಾರರಾದ ಜನಪ್ರಿಯ ಶಾಸಕರಾದ ಹರೀಶ್ ಪೂಂಜಾ ಅವರ ವಿಶೇಷ ಅನುದಾನದಿಂದ ಕಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉರುವಾಲು ಪದವು ಗ್ರಾಮದ ಮುಖ್ಯ ರಸ್ತೆಯ ರಾಜಮಂದಿರ ಕ್ರಾಸ್ ಬಳಿ ಕೊಳವೆ ಬಾವಿ ನಿರ್ಮಾಣಕ್ಕೆ ಮಂಜೂರಾತಿ ದೊರೆತಿರುವುದು ಗ್ರಾಮಸ್ಥರಲ್ಲಿ ಹರ್ಷದ ಅಲೆ ಮೂಡಿಸಿದೆ.

ಗ್ರಾಮಸ್ಥರ ದೀರ್ಘಕಾಲದ ನೀರಿನ ಕನಸು ದೇವತಾ ಕೃಪೆಯಿಂದ ಗಂಗೆಯ ಅನುಗ್ರಹವಾಗಿ ಸಾಕಾರಗೊಂಡಿದ್ದು, ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸಿ ಅಭಿವೃದ್ಧಿಗೆ ಆದ್ಯತೆ ನೀಡುತ್ತಿರುವ ಶಾಸಕರಿಗೆ ಗ್ರಾಮಸ್ಥರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here