ಕೆನರಾ ಅಸೋಸಿಯೇಷನ್ (ರಿ) ಇಲೆಕ್ಟ್ರಾನಿಕ್ ಸಿಟಿ ಬೆಂಗಳೂರು ಇವರ ಆಶ್ರಯದಲ್ಲಿ 2ನೇ ಆಗಸ್ಟ್ 2026ರಂದು ಇಟ್ಟಿನ ನೀಲಾ ಹಾಲ್, ಇಲೆಕ್ಟ್ರಾನಿಕ್ ಸಿಟಿ, ಬೆಂಗಳೂರಲ್ಲಿ ಆಟಿಡೊಂಜಿ ಕೂಟ ವನ್ನು ವಿಶೇಷವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಕುಮಾರಿ ಮೋಕ್ಷಪ್ರಧಾ ಪ್ರಾರ್ಥನೆ ಯಿಂದ ಪ್ರಾರಂಭಿಸಿ, ದೀಪಾ ಬೆಳಗಿಸುವ ಮೂಲಕ ಸಂಘದ ಹಿರಿಯ ಸದಸ್ಯರಾದ ಆರ್. ಎಸ್. ಹೆಗ್ಗಡೆಯವರು ಉದ್ಘಾಟನೆ ಮಾಡಿದರು.
ಜತೆ ಕಾರ್ಯದರ್ಶಿ ಶ್ವೇತಾ ಹೆಗ್ಗಡೆ ಸ್ವಾಗತಿಸಿದರು.ಸಂಘದ ಅಧ್ಯಕ್ಷರಾದ ಸತೀಶ್ ಸುವರ್ಣ ರವರು ಪ್ರಾಸ್ತವಿಕಭಾಷಣದಲ್ಲಿ ಆಟಿಡೊಂಜಿಕೂಟ ಕಾರ್ಯಕ್ರಮದ ಉದ್ದೇಶ ಮತ್ತು ಅಸೋಸಿಯೇಷನ್ ಮುಂದಿನ ಕಾರ್ಯಕ್ರಮ ಗಳ ಬಗ್ಗೆ ವಿವರಿಸಿದರು. ಅಸೋಸಿಯೇಷನ್ ನ ಕಾರ್ಯದರ್ಶಿ ಮೊಹನ್ ದಾಸ್ ಶೆಟ್ಟಿ ಕಳೆದ ಸರದಿಯ ವಾರ್ಷಿಕ ಲೆಕ್ಕಾಚಾರ ವನ್ನು ಮಂಡಿಸಿದರು.
ವಿನಯ ವಿ. ಕುಲಾಲ್ ರವರು ಆಟಿ ತಿಂಗಳಿನ ವಿಶೇಷಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ತುಳುನಾಡಿನ ಗಂಡು ಕಲೆ ಯಕ್ಷಗಾನದ ಬಗ್ಗೆ ಇಂದಿರಾ ವೈ. ದೇರಾಜೆ ವಿವರಿಸಿದರು. ಭೂತರಾಧನೆಯ ಬಗ್ಗೆ ಸ್ಮಿತಾ ಎಸ್. ಶೆಟ್ಟಿ ಹಾಗೂ ತುಳುನಾಡಿನ ಕಂಬಳದ ಬಗ್ಗೆ ಚಂದ್ರಿಕಾ ಶೆಟ್ಟಿ ವಿವರವಾಗಿ ಸಭೆಗೆ ತಿಳಿಸಿದರು. ಗೀತಾ ಕೃಷ್ಣರವರು ಹಾಡಿದ ಆಟಿ ಪಾಡ್ದನ ಎಲ್ಲರ ಗಮನ ಸೆಳೆಯಿತು. ಕಾರ್ಯಕಾರಿ ಸಮಿತಿ ಸದಸ್ಯರಾದ ಮಮತಾ ಲೋಕೇಶ್ ವಂದನಾರ್ಪಣೆ ಕಾರ್ಯಕ್ರಮ ನೆರವೇರಿಸಿದರು.
ಸಂಘದ ಉಪಾಧ್ಯಕ್ಷರು ಗಳಾದ ನವೀನ್ ಶೆಟ್ಟಿ ಮತ್ತು ವಿಜಯ್ ಕುಲಾಲ್ ಎಂ.,ಸಂಘಟನಾ ಕಾರ್ಯದರ್ಶಿ ಯೋಗೀಶ್ ದೇರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಕ್ಕಳಿಗಾಗಿ ಕೃಷ್ಣ,ರಾಧೆ ಮತ್ತು ಸಭಿಕರಿಗೆ ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು, 26 ಬಗೆಯ ವಿವಿಧ ಖಾದ್ಯ ಗಳ ಆಟಿದ ವನಸ್ ಸಂಘದ ಮಹಿಳಾ ಸದಸ್ಯೆಯರ ಸಹಕಾರದಿಂದ ನೆರವೇರಿತು. ಖಜಾಂಜಿ ಯಶವಂತ್ ,ಕಾರ್ಯಕಾರಿ ಸಮಿತಿಯ ಸದಸ್ಯರಾದ ವಸಂತ್ ಪೂಜಾರಿ, ವಿಠ್ಠಲ್ ಗೊಲ್ಲ ಕಾರ್ಯಕ್ರಮ ಕ್ಕೆ ಸಹಕರಿಸಿದರು.
ಮಡಿಕೆ ಒಡೆಯುವುದು, ಲಗೋರಿ, ಚೆನ್ನೆ ಮನೆ ಮುಂತಾದ ಆಟ ಗಳನ್ನು ಸೇರಿದ ಎಲ್ಲಾ ಸದಸ್ಯರು ಕುಟುಂಬ ದ ಜೊತೆಗೆ ಆಡಿ ಸಂಭ್ರಮಿಸಿದರು. ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಂಘದ ಸದಸ್ಯೆ ರೂಪ ಮಂಜುನಾಥ್ ಕಾರ್ಯಕ್ರಮ ವನ್ನು ಬಹಳ ಸುಂದರವಾಗಿ ನಿರೂಪಿಸಿದರು.

