ಆ.09ರಂದು ಮೂಡಬಿದಿರೆಯಲ್ಲಿ ಹಿಂದು ಜಾಗರಣ ವೇದಿಕೆಯಿಂದ ಬೃಹತ್ ಪಂಜಿನ ಮೆರವಣಿಗೆ

0
14

ಹಿಂದೂ ಜಾಗರಣ ವೇದಿಕೆ ಮೂಡಬಿದಿರೆ ತಾಲೂಕು, ಮಂಗಳೂರು ಜಿಲ್ಲೆ ಇದರ ವತಿಯಿಂದ ನಡೆಯಲಿರುವ ಅಖಂಡ ಭಾರತ ಸಂಕಲ್ಪ ದಿನ – ಬೃಹತ್ ಪಂಜಿನ ಮೆರವಣಿಗೆ

ಮೂಡಬಿದಿರೆಯ ಖ್ಯಾತ ನ್ಯಾಯವಾದಿಗಳು ಹಾಗೂ ವಾಗ್ಮಿಗಳೂ ಆಗಿರುವ ಶರತ್ ಶೆಟ್ಟಿ ಅವರ ಘನ ಅಧ್ಯಕ್ಷತೆಯಲ್ಲಿ ನಡೆಯುವ ಅಖಂಡ ಭಾರತ ಸಂಕಲ್ಪ ದಿನದ ಬೃಹತ್ ಪಂಜಿನ ಮೆರವಣಿಗೆಯು ಆಗಸ್ಟ್ 9 ಆದಿತ್ಯವಾರ ಸಂಜೆ 6:30 ಗಂಟೆಗೆ, ಸಾವಿರ ಕಂಬದ ಬಸದಿಯಿಂದ ಸಮಾಜ ಮಂದಿರದವರೆಗೆ ನಡೆಯಲಿದೆ.

ಹತ್ತಾರು ಭಜನಾ ತಂಡಗಳು,ಯುವಸಂಘಟನೆಗಳು, ಮಹಿಳೆಯರು ಯುವಕರು,ಹಿರಿಯರಾದಿಗಳು ಪಾಲ್ಗೊಳ್ಳುವ ಈ ಅಮೋಘವಾದ ಪಂಜಿನ ಮೆರವಣಿಗೆಯು ಹತ್ತಾರು ಚೆಂಡೆ ವಾದನಗಳ, ನಾಸಿಕ್ ಬ್ಯಾಂಡ್ ಹಾಗೂ ಇನ್ನಿತರ ವಾದ್ಯಘೋಷಗಳೊಡನೆ ಮೂಡುಬಿದಿರೆಯ ಐತಿಹಾಸಿಕ ಸಾವಿರ ಕಂಬದ ಬಸದಿಯಿಂದ ಸಂಜೆ 6:30 ಕ್ಕೆ ಪ್ರಾರಂಭವಾಗಲಿರುವುದು.

ಮೂಡುಬಿದಿರೆ ಜೈನ ಮಠದ ಪರಮಪೂಜ್ಯ ಭಟ್ಟಾರಕ ಸ್ವಾಮೀಜಿಯವರ ಆಶೀರ್ವಾದಗಳೊಡನೆ ಉದ್ಘಾಟನೆಯು ನೆರವೇರಲಿರುವುದು. ಖ್ಯಾತ ನ್ಯಾಯವಾದಿಗಳು ಪ್ರಖರ ವಾಗ್ಮಿಗಳು ಪೃಥ್ವಿಶ್ ಧರ್ಮಸ್ಥಳ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ರುದ್ರಾಂಶ ಕನ್ಸ್ಟ್ರಕ್ಷನ್ಸ್ ಮಾಲಕರು ಯುವ ನಾಯಕರಾದ ಅಜಯ್ ದೀಕ್ಷಿತ್ ಶೆಟ್ಟಿ ಯವರು ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ನಾಡು, ನುಡಿ, ಧರ್ಮ ಹಾಗೂ ರಾಷ್ಟ್ರಭಕ್ತಿಯ ಸಂಕಲ್ಪದ ಈ ಪವಿತ್ರ ಕಾರ್ಯಕ್ರಮದಲ್ಲಿ ತಾವೆಲ್ಲರೂ ಕುಟುಂಬ ಸಮೇತರಾಗಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹಿಂದೂ ಜಾಗರಣ ವೇದಿಕೆಯ ಮೂಡುಬಿದಿರೆ ತಾಲೂಕು ಸಂಯೋಜನಕರಾದ ಹರಿಶ್ಚಂದ್ರ ಕೆ. ಸಿ, ಸಹಸಂಯೋಜಕರುಗಳಾದ ಶರತ್ ಮಿಜಾರ್,ಸಂತೋಷ್ ಕುಮಾರ್ ಬನ್ನಡ್ಕ, ಮನವಿ ಮಾಡಿಕೊಂಡಿದ್ದಾರೆ.