ಬೆಂಗಳೂರು ಉತ್ತರ ತಾಲೂಕಿನ ಕುದುರುಗೆರೆ ಗ್ರಾಮದಲ್ಲಿ ಹಾಡಹಗಲೇ ಮಹಿಳೆಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಕುದುರುಗೆರೆ ನಿವಾಸಿ ದಾಕ್ಷಾಯಣಮ್ಮ(55) ಕೊಲೆಯಾದ ಮಹಿಳೆ. ಗ್ರಾಮದ ಸಮೀಪದ ಶಾಲೆಯಿಂದ ಮೊಮ್ಮಗನನ್ನು ಕರೆದುಕೊಂಡು ಬರಲು ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬೈಕ್ ನಲ್ಲಿ ಬಂದ ತೋಟದ ಗುಡ್ಡಹಳ್ಳಿ ನಿವಾಸಿ ವೀರಭದ್ರಪ್ಪ ಎಂಬಾತ ದಾಕ್ಷಾಯಣಮ್ಮ ಅವರ ಕುತ್ತಿಗೆ ಭಾಗಕ್ಕೆ ಕೊಡಲಿಯಿಂದ ಹೊಡೆದಿದ್ದಾನೆ.
ನೆಲಕ್ಕೆ ಬಿದ್ದ ಅವರನ್ನು ಸೌದೆ ಸೀಳುವಂತೆ ಕೊಡಲಿಯಿಂದ ಹಲ್ಲೆ ಮಾಡಿದ್ದು ಸ್ಥಳದಲ್ಲೇ ದಾಕ್ಷಾಯಣಮ್ಮ ಮೃತಪಟ್ಟಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭೂ ವ್ಯಾಜ್ಯ ವಿಚಾರವಾಗಿ ಕೊಲೆ ನಡೆದಿದೆ ಎಂದು ಹೇಳಲಾಗಿದೆ.

