ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ “ಚೈತನ್ಯ ಶಿರೋಮಣಿ” ರಾಷ್ಟ್ರ ಮಟ್ಟದ ಗೌರವ ಪ್ರಶಸ್ತಿಗೆ ಆಯ್ಕೆ

0
27

ದಾವಣಗೆರೆ : ಭಾರತದ ಅತ್ಯಂತ ಪ್ರಸಿದ್ಧ ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರಾದ ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ “ರಾಷ್ಟ್ರೀಯ ಯುವ ದಿನಾಚರಣೆ” ನಿಮಿತ್ಯವಾಗಿ ಬೆಳಗಾವಿಯ ನಾಗರಮುನ್ನೋಳಿಯ ಕವಿತ್ತಕರ್ಮಮಣಿ ಪೌಂಡೇಶನ್ ಆಶ್ರಯದಲ್ಲಿ ದಾವಣಗೆರೆಯ ಸಾಂಸ್ಕೃತಿಕ ರಾಯಭಾರಿ ಎಂದೇ ಖ್ಯಾತರಾದ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ “ಚೈತನ್ಯ ಶಿರೋಮಣಿ” ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕವಿತ್ತಕರ್ಮಮಣಿ ಪೌಂಡೇಶನ್ ಸಂಸ್ಥಾಪಕರಾದ ಕವಿತ್ತಕರ್ಮಮಣಿ ತಿಳಿಸಿದ್ದಾರೆ.

ವಾಣಿಜ್ಯ ನಗರಿ ದಾವಣಗೆರೆಯನ್ನು ಸಾಂಸ್ಕೃತಿಕ ನಗರಿಯಾಗಿ ಪರಿವರ್ತನೆ ಮಾಡಿ ಕಳೆದ 4 ದಶಕಗಳಿಂದ ಪರಿವರ್ತನೆ ಮಾಡಿದ ನಿರಂತರವಾಗಿ ಕಠಿಣ ಪರಿಶ್ರಮದಿಂದ ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಡೆಸುತ್ತಿರುವ ಅವರ ಸಾಧನೆಗಳನ್ನು ಗುರುತಿಸಿ , ಈ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಕವಿತ್ತಕರ್ಮಮಣಿ ಪೌಂಡೇಶನ್ ಸಮಿತಿಯವರು ಪ್ರಕಟಿಸಿದ್ದಾರೆ.

LEAVE A REPLY

Please enter your comment!
Please enter your name here