ಕಾರ್ಕಳದಲ್ಲಿ ಗೀತಾಂತರಂಗ ತಿಂಗಳ ತಿರುಳು ಭಗವದ್ಗೀತೆ ಉಪನ್ಯಾಸ

0
92

ಸೋಂದಾ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ ಶಿರಸಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಕಳ ಶ್ರೀ ಬಿ ಮಂಜುನಾಥ ಪೈ ಸಾಂಸ್ಕೃತಿಕ ಸಭಾ ಭವನ ಅಮಿತ್ ಎಸ್ ಪೈ ಮೆಮೋರಿಯಲ್ ಸ್ವಾಮಿ ವಿವೇಕಾನಂದ ಯೋಗ ಮತ್ತು ಧ್ಯಾನ ಮಂದಿರ ಪೆರ್ವಾಜೆ ಶ್ರೀ ಭಗವದ್ಗೀತಾ ಮಿತ್ರ ವೃಂದಾ ಶಿವತಿಕೆರೆ ಹಿರಿಯಂಗಡಿ ಕಾರ್ಕಳ ಇವರ ಸಹಯೋಗದಲ್ಲಿ ಶ್ರೀಮದ್ ಭಗವದ್ಗೀತೆ ಹದಿನೆಂಟು ಅಧ್ಯಾಯಗಳ ಸರಣಿ ಪ್ರವಚನ ಕಾರ್ಯಕ್ರಮ ಶುಭಾರಂಭವು ಹಿರಿಯಂಗಡಿ ಶಿವತಿಕೆರೆಯ ಉಮಾಮಹೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಮೊದಲಿಗೆ ಸೇರಿದ ಸಮಸ್ತರಿಂದ ಭಗವದ್ಗೀತೆಯ ಹನ್ನೆರಡನೆಯ ಅಧ್ಯಾಯದ ಸಾಮೂಹಿಕ ಪಠಣ ನಡೆಯಿತು. ಬಳಿಕ ಸಭಾ ಕಾರ್ಯಕ್ರಮದಲ್ಲಿ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ರಾಮಚಂದ್ರ ನಾಯಕ್ ದೀಪ ಪ್ರಜ್ವಲನೆ ಮಾಡಿದರು. ನಂತರ ಶಿಕ್ಷಕ ಗಣೇಶ್ ಜಾಲ್ಸೂರು ಇವರಿಂದ ಗೀತೆಯ ಮೊದಲ ಅಧ್ಯಾಯದ ಅರ್ಜುನ ವಿಷಾದ ಯೋಗದ ಉಪನ್ಯಾಸ ನಡೆಸಿಕೊಟ್ಟರು.

ಈ ಗೀತಾ ಅಭಿಯಾನದಲ್ಲಿ ಹಿರಿಯಂಗಡಿ ಶಿವತಿಕೆರೆ ಉಮಾ ಮಹೇಶ್ವರ ದೇವಸ್ಥಾನದ ಮೊಕ್ತೇಸರರಾದ ಸಂಜೀವ ದೇವಾಡಿಗ, ಸುದರ್ಶನ ಭಂಡಾರಿ, ಗುರುಪ್ರಸಾದ್ ರಾವ್ ,ಜಯಂತಿ ದೇವಾಡಿಗ ದೇವಳದ ಸೇವಾ ಸಮಿತಿ ಅಧ್ಯಕ್ಷ ನಾಗೇಶ್ ದೇವಾಡಿಗ ಉಪಸ್ಥಿತರಿದ್ದರು. ಅರುಣಾ ದಿನೇಶ್ ಕಾರ್ಯಕ್ರಮ ನಿರೂಪಿಸಿ , ದೀಪಾ ದೇವಾಡಿಗ ಸ್ವಾಗತಿಸಿದರು. ಕು ಸ್ವಸ್ತಿ ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಗೀತಾ ಅಭಿಯಾನದ ಸಂಘಟಕ ಸಂಜಯ ಕುಮಾರ್ ಸಂಯೋಜಿಸಿದರು , ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ನವೀನ್ ಪೈ ಸಹಕರಿಸಿದರು.

LEAVE A REPLY

Please enter your comment!
Please enter your name here