ಬಜಪೆ : ರಾಜಶ್ರೀ ಎಂಟರ್‌ಪ್ರೈಸಸ್ ಅರ್ಪಿಸುವ ಹಾಗೂ ಚರಣ್ ರಾಜ್ ಕುಕ್ಕಾಜೆ ಅವರ ಸಂಚಾಲಕತ್ವದ ಸರಸ್ವತಿ ಕಲಾವಿದರು, ಬಜಪೆ ತಂಡದ ಈ ವರ್ಷದ ವಿಭಿನ್ನ ಶೈಲಿಯ ಹಾಸ್ಯಮಯ ತುಳು ಸಾಂಸಾರಿಕ ನಾಟಕ ‘ಭೈರವಿ’ ಸೆಪ್ಟೆಂಬರ್ ತಿಂಗಳಿನಲ್ಲಿ ರಂಗಪ್ರದರ್ಶನ ಕಾಣಲಿದೆ.
ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ ಉತ್ತಮ ಸಂದೇಶ ನೀಡುವ ಉದ್ದೇಶದಿಂದ ಸಿದ್ಧಗೊಂಡಿರುವ ಈ ನಾಟಕದ ಕಥೆ ಮತ್ತು ಸಂಭಾಷಣೆಯನ್ನು ಕಲಾಸಿಂಚನ ಮೋಹಿತ್ ಪೂಜಾರಿ ಅಡು ರಚಿಸಿದ್ದು, ಕಲಾರತ್ನ ವಿನಯ್ ಕುಮಾರ್ ಅದ್ಯಪಾಡಿ ನಿರ್ದೇಶನ ವಹಿಸಿದ್ದಾರೆ. ಕಲಾರತ್ನ ಜೆ.ಪಿ. ಭಟ್ ಪೇಜಾವರ ಸಮಗ್ರ ನಿರ್ವಹಣೆಯ ಹೊಣೆ ಹೊತ್ತಿದ್ದು, ನಿಶಾಲ್ ವಾಮಂಜೂರ್ ಹಾಗೂ ಜಯರಾಜ್ ವಾಮಂಜೂರ್ ಸಂಗೀತ ನಿರ್ದೇಶನ ನೀಡುತ್ತಿದ್ದಾರೆ.
ನಾಟಕದಲ್ಲಿ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಜ್ಞಾ ಬಜ್ಪೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದು, ಮಹೇಂದ್ರ ಕಾಟಿಪಳ್ಳ, ಜೆ.ಪಿ. ಭಟ್ ಪೇಜಾವರ, ಸುಕೇಶ್ ಕಲ್ಲಮುಂಡ್ಕೂರು, ನಿತೇಶ್ ಪೂಜಾರಿ ಬಜಪೆ, ಸ್ವರೂಪ್ ಕಾಮತ್ ಸುಂಕದಕಟ್ಟೆ, ರಾಹುಲ್ ಶೆಟ್ಟಿ ಪೋರ್ಕೊಡಿ, ಆಶ್ಲೇಶ್ ಕಟ್ಟಾಡಿ, ಶ್ರೀಜೇಯ್ ಮಿಜಾರ್, ಜಯಲಕ್ಷ್ಮಿ ಮುರನಗರ, ಮಮತಾ ಪೋರ್ಕೊಡಿ ಹಾಗೂ ಅಶ್ಮಿತಾ ಪೋರ್ಕೊಡಿ ಸೇರಿದಂತೆ ಪ್ರತಿಭಾವಂತ ಕಲಾವಿದರ ಬಳಗ ಅಭಿನಯಿಸಲಿದೆ.
ವಿಭಿನ್ನ ಕಥಾಹಂದರ, ಹಾಸ್ಯಭರಿತ ನಿರೂಪಣೆ, ಮನಮೋಹಕ ಸಂಗೀತ ಹಾಗೂ ಅನುಭವಿ ಕಲಾವಿದರ ಅಭಿನಯದೊಂದಿಗೆ ‘ಭೈರವಿ’ ಈ ವರ್ಷದ ತುಳು ರಂಗಭೂಮಿಯಲ್ಲಿ ವಿಶೇಷ ಆಕರ್ಷಣೆಯಾಗುವ ನಿರೀಕ್ಷೆ ಮೂಡಿಸಿದ್ದು, ತುಳು ನಾಟಕಾಭಿಮಾನಿಗಳು ಈಗಾಗಲೇ ನಾಟಕಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

