ಸಿದ್ದಿವಿನಾಯಕ ಜ್ಞಾನವಿಕಾಸ ಕೇಂದ್ರದಿಂದ ಭಜನೆ, ಸತ್ಯನಾರಾಯಣ ಪೂಜೆ

0
14

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋ. ಬಿ ಸಿ ಟ್ರಸ್ಟ್ (ರಿ ) ವಿಟ್ಲ ಇದರ ವಿಟ್ಲ ಕಸಬಾ ಮಾದಕಟ್ಟೆ ಒಕ್ಕೂಟದ ಶ್ರೀ ಸಿದ್ದಿವಿನಾಯಕ ಜ್ಞಾನವಿಕಾಸ ಕೇಂದ್ರ ತಾಳಿತ್ತನೂಜಿಯ ವತಿಯಿಂದ ಭಜನೆ,ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋ. ಬಿ ಸಿ ಟ್ರಸ್ಟ್ (ರಿ ) ವಿಟ್ಲ ಇದರ ವಿಟ್ಲ ಕಸಬಾ ಮಾದಕಟ್ಟೆ ಒಕ್ಕೂಟದ ಶ್ರೀ ಸಿದ್ದಿವಿನಾಯಕ ಜ್ಞಾನವಿಕಾಸ ಕೇಂದ್ರ ತಾಳಿತ್ತನೂಜಿ ವತಿಯಿಂದ ಭಜನೆ,ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಾದಕಟ್ಟೆ ದೇವಸ್ಥಾನದ ಪಾಂಚಜನ್ಯ ಸಭಾಭವನದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಕೇಂದ್ರದ ಸಂಯೋಜಕಿ ರೂಪಾ ರವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ,ದೇವಸ್ಥಾನದ ಅಧ್ಯಕ್ಷರ ಶ್ರೀ ಗೋಪಾಲಕೃಷ್ಣ ಭಟ್ ಉದ್ಘಾಟಿಸಿದರು,

ಎರುಂಬು ಬಾಲಕೃಷ್ಣ ಕಾರಂತರು ಧಾರ್ಮಿಕ ಉಪನ್ಯಾಸ ನೀಡಿದರು, ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕೃಷಿಯಧಿಕಾರಿಗಳಾದ ಐತ್ತಪ್ಪ ಪೂಜಾರಿ, ಧಾರ್ಮಿಕ ಮುಂದಾಳು ದಾಮೋದರ ರೈ ಬಾರೆಬೆಟ್ಟು, ವಿಟ್ಲಪಡ್ನೂರು ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರ ಕುಲ್ಯಾರು ನಾರಾಯಣ ಶೆಟ್ಟಿ,ಸಾಲೆತ್ತೂರು ವಯಧ್ಯಕ್ಷ ದಿನೇಶ್ ಶೆಟ್ಟಿ, ವಿಟ್ಲ ಶೌರ್ಯ ವಿಪತ್ತು ತಂಡದ ಕ್ಯಾಪ್ಟನ್ ಗಣೇಶ್ ಶೆಟ್ಟಿ, ಸಂಯೋಜಕಿ ದೀಪಾ ಉಪಸ್ಥಿತರಿದ್ದರು.

ಪ್ರಮೀಳಾ ಸ್ವಾಗತಿಸಿ ಶಾರದಾ ವಂದಿಸಿದರು. ಉಮಾಶಂಕರಿ ಅನಿಸಿಕೆ ವ್ಯಕ್ತಪಡಿಸಿದರು. ಸೇವಾಪ್ರತಿನಿಧಿ ಲೀಲಾವತಿ ಸಹಕರಿಸಿದರು .