Saturday, April 26, 2025
HomeUncategorizedಮಕ್ಕಳಿಗೆ ನಮ್ಮ ಮೂಲ ಸಂಸ್ಕಾರ ಸಂಸ್ಕೃತಿ ಜೊತೆಗೆ ಏಕಾಗ್ರತೆಗೆ, ನೆನಪಿನ ಶಕ್ತಿ ವೃದ್ಧಿಸಲು ಭಜನೆ ಸಹಕಾರಿ:...

ಮಕ್ಕಳಿಗೆ ನಮ್ಮ ಮೂಲ ಸಂಸ್ಕಾರ ಸಂಸ್ಕೃತಿ ಜೊತೆಗೆ ಏಕಾಗ್ರತೆಗೆ, ನೆನಪಿನ ಶಕ್ತಿ ವೃದ್ಧಿಸಲು ಭಜನೆ ಸಹಕಾರಿ: ಸಂತೋಷ್

ಬಂಟ್ವಾಳ : ಮಕ್ಕಳಿಗೆ ನಮ್ಮ ಮೂಲ ಸಂಸ್ಕಾರ ಸಂಸ್ಕೃತಿ ಜೊತೆಗೆ ಏಕಾಗ್ರತೆಗೆ, ನೆನಪಿನ ಶಕ್ತಿ ವೃದ್ಧಿಸಲು ಭಜನೆ ಸಹಕಾರಿಯಾಗಿದೆ, ಎಂದು ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಹೇಳಿದರು.

ಅವರು ರವಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್( ರಿ.) ಬಂಟ್ವಾಳ ಇದರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ತುಂಬೆ ವಲಯ ವತಿಯಿಂದ ಶ್ರೀ ಕೋದಂಡರಾಮ ಭಜನಾ ಮಂಡಳಿ ಅಂತರ ರಾಮನಗರ ನರಿಕೊಂಬು ಇದರ ಸಹಯೋಗದೊಂದಿಗೆ ಒಂದು ವಾರದ ಭಜನಾ ತರಬೇತಿ ಶಿಬಿರವನ್ನು ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಅಂತರ ರಾಮನಗರ ಶ್ರೀ ಕೋದಂಡರಾಮ ಭಜನಾ ಮಂಡಳಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿ ಮಾತಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ, ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯರಾದ ಕಿಶೋರ್ ಶೆಟ್ಟಿ ಅಂತರ, ಪ್ರಗತಿಪಾರ ಕೃಷಿಕ ಪ್ರೇಮನಾಥ್ ಶೆಟ್ಟಿ ಅಂತರ, ಕೋದಂಡರಮ ಭಜನಾ ಮಂದಿರ ಅಧ್ಯಕ್ಷ ಚಂದ್ರಶೇಖರ ಗೌಡ,ಜಿಲ್ಲಾ ಭಜನಾ ಪರಿಷತ್ ಸಮವ್ವಯಾಧಿಕಾರಿ ಸಂತೋಷ್,ಅಳಿಯೂರು, ಭಜನೆ ತರೆಬೆತು ದಾರರಾದ ಸಂದೇಶ್, ಗಗನ್, ಆಕಾಶ್, ಮೊದಲಾದವರು ಉಪಸ್ಥಿತರಿದ್ದರು.

ಮಕ್ಜಳು ಪ್ರಾರ್ಥಿಸಿ
ನರಿಕೊಂಬು ಎ ಒಕ್ಕೂಟ ಅಧ್ಯಕ್ಷ ಕೃಷ್ಣಪ್ಪ ಸಪಲ್ಯ ಸ್ವಾಗತಿಸಿ, ಭಜನಾ ಮಂಡಳಿ ಸದಸ್ಯ ಗಣೇಶ್ ಕುಮಾರ್ ವಂದಿಸಿದರು. ತುಂಬೆ ವಲಯ ಮೇಲ್ವಿಚಾರಕಿ ಮಮತಾ ಸಂತೋಷ್ ಕಾರ್ಯಕ್ರಮ ನೀರೂಪಿಸಿದರು. ಸೇವಾಪ್ರತಿನಿದಿಗಳಾದ ಕುಸುಮಾವತಿ ಹಾಗೂ ಪ್ರತಿಭಾ ಸಹಕರಿಸಿದರು.

RELATED ARTICLES
- Advertisment -
Google search engine

Most Popular