Saturday, April 19, 2025
HomeUncategorizedನಾರಾಯಣ ಗುರುಗಳು ಎಲ್ಲರಿಗೂ ಪ್ರಾತಃ ಸ್ಮರಣೀಯರು : ಧನುಷ್ ಮದ್ವ

ನಾರಾಯಣ ಗುರುಗಳು ಎಲ್ಲರಿಗೂ ಪ್ರಾತಃ ಸ್ಮರಣೀಯರು : ಧನುಷ್ ಮದ್ವ

ಬಂಟ್ವಾಳ : ಮತ ಯಾವುದೇ ಇರಲಿ ಮನುಷ್ಯ ಒಳ್ಳೆಯವನಾಗಿರಬೇಕು ಎಂಬ ಅಮರ ತತ್ವಗಳನ್ನು ಅನುಷ್ಟಾನಗೊಳಿಸಿ, ವಿಶ್ವಮಾನವ ಧರ್ಮದ ಹರಿಕಾರರಾಗಿ ಅವತರಿಸಿದ ಬ್ರಹ್ಮಶ್ರೀ ನಾರಾಯಣಗುರುಗಳು ಎಲ್ಲರಿಗೂ ಪ್ರಾತಃ ಸ್ಮರಣೀಯರು ಎಂದು ಧನುಷ್ ಮದ್ವ ತಿಳಿಸಿದರು.

ಅವರು ಯುವವಾಹಿನಿ ಬಂಟ್ಟಾಳ ಘಟಕದ ಮಾಜಿ ಅಧ್ಯಕ್ಷರಾದ ಅರುಣ್ ಕುಮಾರ್ ಬಿ.ಸಿರೋಡ್ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ 41 ಮಾಲಿಕೆಯಲ್ಲಿ ಗುರು ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಪ್ರಥಮ ಉಪಾಧ್ಯಕ್ಷರಾದ ನಾರಾಯಣ ಪಲ್ಲಿಕಂಡ, ಕೋಶಾಧಿಕಾರಿ ಗೀತಾ ಜಗದೀಶ್,ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಕಿರಣ್ ಪೂಂಜರಕೋಡಿ, ಸಂಘಟನಾ ಕಾರ್ಯದರ್ಶಿ ಉದಯ್ ಮೇನಾಡ್, ಹರಿಣಾಕ್ಷಿ ನವೀಶ್ ,ಮಾಜಿ ಮಾಜಿ ಅಧ್ಯಕ್ಷರಾದ ನಾಗೇಶ್ ಪೊನ್ನೋಡಿ, ಪ್ರೇಮನಾಥ್ ಕರ್ಕೇರ, ಶಿವಾನಂದ ಎಂ, ರಾಜೇಶ್ ಸುವರ್ಣ, ಹರೀಶ್ ಎಸ್ ಕೊಟ್ಯಾನ್,ಸದಸ್ಯರಾದ, ನಾಗೇಶ್ ಏಲಬೆ, ಹರೀಶ್ ಅಜೆಕಲಾ, ವಿಘ್ನೇಶ್ ಬೊಳ್ಳಾಯಿ, ಯಶೋಧರ ಕಡಂಬಲ್ಕೆ, ಯತೀಶ್ ಬೊಳ್ಳಾಯಿ, ಸುಲತಾ ಸಾಲ್ಯಾನ್, ಸುನಿತಾ ನಿತಿನ್, ಸಚಿನ್ ಕೊಡ್ಮಾಣ್,ಅಜಯ್ ನರಿಕೊಂಬು, ಹರೀಶ್ ಅಜೆಕಲಾ, ರಾಜೇಶ್ ಪೂಂಜರಕೋಡಿ, ಜಗದೀಶ್ ಕಲ್ಲಡ್ಕ, ಪ್ರಶಾಂತ್ ಏರಮಲೆ,ಮತ್ತಿತರರು ಉಪಸ್ಥಿತರಿದ್ದರು.

ಗುರುತತ್ವವಾಹಿನಿ ಕಾರ್ಯಕ್ರಮದ ಮೊದಲಾಗಿ ಭಜನಾ ಸಂಕೀರ್ತನೆ ನಡೆಯಿತು. ಹಾರ್ಮೋನಿಯಂ ವಾದಕರಾದ ರಾಜೇಶ್ ಅಮ್ಟೂರು ಮತ್ತು ತಬಲಾ ದಲ್ಲಿ ವಚನ್ ಅಮ್ಟೂರು ಸಹಕರಿಸಿದರು.

ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.

RELATED ARTICLES
- Advertisment -
Google search engine

Most Popular