ಬಳ್ಕೂರಿನ ಭರತನಾಟ್ಯ ಕಲಾವಿದೆ ವಿಧೂಷಿ ಯುಕ್ತಿ ಉಡುಪ ಇವರಿಗೆ ಚೆನ್ನೈ ಯ ಪ್ರತಿಷ್ಠಿತ ಸಂಸ್ಥೆ ಕೃಷ್ಣ ಗಾನ ಸಭಾ ಇವರ ವತಿಯಿಂದ ಕೊಡಮಾಡಲ್ಪಡುವ ಗುರು ಸರಸ ಪ್ರಶಸ್ತಿ ಗೆ ಆಯ್ಕೆ .
ಚೆನ್ನೈನ ಪ್ರತಿಷ್ಠಿತ ಸಾಂಸ್ಕೃತಿಕ ವೇದಿಕೆ ಕೃಷ್ಣಗಾನ ಸಭಾ ದಲ್ಲಿ 2024-2025ನೇ ಸಾಲಿನಲ್ಲಿ ನಡೆದ ಇಲ್ಲಮಾಯಿಲ್ ತಿರುಮೈ ಡಾನ್ಸ್ ಸೀರಿಸ್ ನಲ್ಲಿ ಅತ್ಯುತ್ತಮ ಪ್ರದಶ೯ನ ನೀಡಿದ ಭರತನಾಟ್ಯ ಕಲಾವಿದೆ ಕುಮಾರಿ ಯುಕ್ತಿ ಉಡುಪ ಬಳ್ಕೂರು ಇವರಿಗೆ ಗುರು ಸರಸ ಪ್ರಶಸ್ತಿ ಗೆ ಆಯ್ಕೆ . ಡಿಸೆಂಬರ್ 12 ರಂದು ಚೆನ್ನೈ ನ ಕೃಷ್ಣಗಾನ ಸಭಾದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಮದ್ರಾಸ್ ಐಐಟಿ ಡೈರೆಕ್ಟರ್ ಡಾ.ಕಾಮಕೋಟಿ ವಿಜಿನಾಥನ್ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಯುಕ್ತಿ ಉಡುಪ ಇವರು ಕುಂದಾಪುರ ಪ್ರತಿಷ್ಠಿತ ನಾಟ್ಯ ಸಂಸ್ಥೆ ನೃತ್ಯ ವಸಂತ ನಾಟ್ಯಾಲಯದ ವಿಧೂಷಿ ಪ್ರವಿತಾ ಅಶೋಕ್ ಇವರಿಂದ ತರಭೇತಿ ಪಡೆದಿದ್ದಾರೆ.ಇವರು ಬಳ್ಕೂರು ರಾಘವೇಂದ್ರ ಉಡುಪ ಹಾಗೂ ಶ್ರೀಕಾಂತಿ ಉಡುಪ ದಂಪತಿಯ ಪುತ್ರಿ.


