ಮಂಗಳೂರು; ಕರಾವಳಿ ಮಂದಿಗೆ “ಬಲೆ ಬಲೆ ಗೈಸ್…” ಖ್ಯಾತಿಯ ಯೂಟ್ಯೂಬರ್ ರಕ್ಷಿತಾ ಬಿಗ್ ಸಪ್ರೈಸ್ ಕೊಟ್ಟಿದ್ದಾರೆ. ಬಿಗ್ ಬಾಸ್ ಸೀಸನ್ 12 ರಲ್ಲಿ ಸ್ಪರ್ಧಿಯಾಗಿ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಗೆ
ಪ್ರವೇಶಿಸಿದ್ದಾರೆ. ಈಗಗಾಲೇ ಬಿಬಿಕೆ 12 ಗ್ರಾಂಡ್ ಓಪನಿಂಗ್ ಕಾರ್ಯಕ್ರಮವಾಗಿದ್ದು, ಅದಕ್ಕೂ ಮುನ್ನ ಕಲರ್ಸ್ ಕನ್ನಡ ರಿಲೀಸ್ ಮಾಡಿರುವ ಪ್ರೊಮೋದಲ್ಲಿ ರಕ್ಷಿತಾ ಸ್ಪರ್ಧಿ ಅನ್ನೋದು ಕನ್ಫಾರ್ಮ್ ಆಗಿದೆ.

ತಮ್ಮ ಯುಟ್ಯೂಬ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ತುಳು ಮಿಶ್ರಿತ ಕನ್ನಡದ ಮೂಲಕ ಬ್ಲಾಗ್ ಗಳಲ್ಲಿ ರಕ್ಷಿತಾ ಮನೆಮಾತಾಗಿದ್ದರು. ಅವರ ಬಲೆ ಬಲೆ ಎಂಬ ಮಾತು ಸಖತ್ ವೈರಲ್ ಆಗಿತ್ತು. ಯೂಟ್ಯೂಬ್ ನಲ್ಲಿ 2 ಲಕ್ಷದ 16 ಸಾವಿರ ಸಬ್ಸ್ಕೈಬರ್ ಹೊಂದಿರುವ ರಕ್ಷಿತಾ ಇನ್ಟಾಗ್ರಾಂನಲ್ಲಿ 3 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿ ಎಂಟರ್ ಟೈನ್ ಮಾಡ್ತಾರೆ ಅನ್ನೋದನ್ನು ಕಾದು ನೋಡಬೇಕು.

