ಶಾರದಾ ಸೇವಾ ಪ್ರತಿಷ್ಠಾನ ಕಲ್ಲಡ್ಕ ವತಿಯಿಂದ “ಮಾರ್ನೆಮಿದ ಗೊಬ್ಬು” ಕ್ರೀಡಾಕೂಟ

0
149

ಕಲ್ಲಡ್ಕ : ಶ್ರೀ ಶಾರದಾ ಸೇವಾ ಪ್ರತಿಷ್ಠಾನ ಕಲ್ಲಡ್ಕ ಇದರ ಆಶ್ರಯದಲ್ಲಿ ಜರಗುವ 48ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ ಅಂಗವಾಗಿ “ಮಾರ್ನೆಮಿದ ಗೊಬ್ಬು” ಎಂಬ ಕ್ರೀಡಾಕೂಟ ಕಲ್ಲಡ್ಕ ಉತ್ಸವದ ಅಂಗಣದಲ್ಲಿ ರವಿವಾರ ಜರಗಿತು.

ಓಂ ಶಕ್ತಿ ಫ್ರೆಂಡ್ಸ್ ನ ಗೌರವಾಧ್ಯಕ್ಷ ರತ್ನಾಕರ ಶೆಟ್ಟಿ ಮತ್ತು ಹಿರಿಯ ಕಬಡ್ಡಿ ಕ್ರೀಡಾಪಟು ಸಂಜೀವ ಸಪಲ್ಯ ಇವರು ಕ್ರೀಡಾಕೂಟವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಆಧುನಿಕ ಯುಗದಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಮೊಬೈಲ್ ಲ್ಲಿ ಕಾಲ ಕಳೆಯುತ್ತಿರುವ ಸಮಯದಲ್ಲಿ, ಎಲ್ಲರನ್ನೂ ಕ್ರೀಡಾಂಗಣಕ್ಕೆ ಕರೆ ತರಲು ಈ ರೀತಿಯ ಕ್ರೀಡಾಕೂಟಗಳು ಎಲ್ಲಾ ಕಡೆಯಲಿ ನಡೆಯಲಿ ಎಂದು ರತ್ನಾಕರ ಶೆಟ್ಟಿಯವರು ಶುಭ ಹಾರೈಸಿದರು.
ಉತ್ಸವ ಸಮಿತಿಯ ಅಧ್ಯಕ್ಷರಾದ ಯೋಗೀಶ್ ಪೂಜಾರಿ ಹಾಗೂ ಕಾರ್ಯದರ್ಶಿ ಪ್ರಮಿತ್ ಶೆಟ್ಟಿ ವೇದಿಕೆಯಲ್ಲಿದ್ದರು. ಪ್ರತಿಷ್ಠಾನದ ಅಧ್ಯಕ್ಷರಾದ ಯತೀನ್ ಕುಮಾರ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ವಜ್ರನಾಥ್ ಕಲ್ಲಡ್ಕ ವಂದಿಸಿದರು. ಪ್ರತಿಷ್ಠಾನದ ಕೋಶಾಧಿಕಾರಿ ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here