ರಕ್ಷಿತಾ ಶೆಟ್ಟಿ ಅವರು ಬಿಗ್‌ಬಾಸ್ ಸೀಸನ್ 12ರಲ್ಲಿ ರನ್ನರ್ ಅಪ್ ಆಗಿದ್ದು, ತಮ್ಮ ನಟನೆ ಹಾಗೂ ಭಾಷೆಯಿಂದಲೇ ಹೆಚ್ಚಿನ ಜನರಿಗೆ ರಕ್ಷಿತಾ ಅವರು ಹತ್ತಿರವಾಗಿದ್ದಾರೆ. ಇದೀಗ ರಕ್ಷಿತಾ ಶೆಟ್ಟಿ ಹೊಸ ಉದ್ಯಮವನ್ನು ಶುರು ಮಾಡಿದ್ದಾರೆ. ತಮ್ಮ ಊರಿನಲ್ಲಿ ‘ಪಟಾಕಿ ಕಿಚನ್’ ಅನ್ನು ಆರಂಭಿಸಿದ ಅವರು, ಇನ್ಮುಂದೆ ತಮ್ಮ ಅಡುಗೆಯನ್ನು ಇಲ್ಲಿಯೇ ಮಾಡಲಿದ್ದಾರೆ.
ರಕ್ಷಿತಾ ಅವರು ಸಾಮಾಜಿಕ ಮಾಧ್ಯಮದ ಮೂಲಕವೇ ಹೆಚ್ಚು ಮನ್ನಣೆ ಪಡೆದವರು. ಇದರಿಂದಾಗಿ ಇವರು ಬಿಗ್‌ಬಾಸ್ ಸೀಸನ್ 12ಕ್ಕೂ ಪ್ರವೇಶ ಪಡೆದರು. ರಕ್ಷಿತಾ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪಟಾಕಿ ಕಿಚನ್ ಅನ್ನು ರಘು ಅವರೊಂದಿಗೆ ಸೇರಿ ಉದ್ಘಾಟಿಸಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ವಿಡಿಯೊದಲ್ಲಿ ಮಾತನಾಡಿರುವ ರಕ್ಷಿತಾ ‘ಇನ್ನು ಮುಂದೆ ನಮ್ಮ ಕುಟುಂಬದ ಎಲ್ಲಾ ಸದಸ್ಯರು ಇಲ್ಲಿಯೇ ಅಡುಗೆ ಮಾಡುತ್ತೇವೆ’ ಎಂದು ಹೇಳಿಕೊಂಡಿದ್ದಾರೆ. ಪಟಾಕಿ ಕಿಚನ್ ಉದ್ಘಾಟನೆಗೆ ಬಿಗ್‌ಬಾಸ್ ರಘು ಕೂಡ ಆಗಮಿಸಿದ್ದರು. ಇದೇ ವೇಳೆ ರಘು ಅವರನ್ನು ನನ್ನ ಅಣ್ಣ ಎಂದು ರಕ್ಷಿತಾ ಕರೆದಿದ್ದಾರೆ. ಬಿಗ್‌ಬಾಸ್‌ನಲ್ಲಿ ರಕ್ಷಿತಾ ಅವರೊಟ್ಟಿಗೆ ಗಿಲ್ಲಿ ಹಾಗೂ ರಘು ಅವರು ಉತ್ತಮ ಬಾಂಧವ್ಯವನ್ನು ಹೊಂದಿದ್ದರು.
ಬಿಗ್‌ಬಾಸ್ ಮನೆಯಲ್ಲಿ ಒಬ್ಬರನ್ನೊಬ್ಬರು ಎಂದಿಗೂ ಬಿಟ್ಟು ಕೊಟ್ಟಿರಲಿಲ್ಲ. ಇದೀಗ ಬಿಗ್‌ಬಾಸ್ ಮನೆಯಿಂದ ಆಚೆಬಂದ ಮೇಲು ಇವರ ಸ್ನೇಹ ಮತ್ತಷ್ಟು ಗಟ್ಟಿಯಾಗಿದೆ. ರಕ್ಷಿತಾ ಅವರು ಪಟಾಕಿ ಕಿಚನ್ ಅನ್ನು ಸ್ವತಃ ರಘು ಜೊತೆ ಸೇರಿ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದ್ದಾರೆ.
ರಕ್ಷಿತಾ ಅವರು ಈ ಹಿಂದೆ ಬಿಗ್‌ಬಾಸ್ ಮನೆಯಲ್ಲಿದ್ದಾಗ ಕಿಚನ್ ಮಾಡುವ ಕನಸಿದೆ ಎಂದು ಹೇಳಿಕೊಂಡಿದ್ದರು. ಇದೀಗ ಅವರ ಕನಸು ನನಸಾಗಿದೆ. ವಿಡಿಯೊದಲ್ಲಿ ಮಣ್ಣಿನಿಂದ ತಯಾರಿಸಿದ ಪಾತ್ರೆಗಳನ್ನು ಬಳಸಿ ಅಡುಗೆ ತಯಾರಿಸುವುದನ್ನು ತೋರಿಸಲಾಗಿದೆ. ಕಿಚನ್ ಅನ್ನು ಮರಗಳ ಹಲಗೆ ಹಾಗೂ ನೈಸರ್ಗಿಕ ವಸ್ತುಗಳನ್ನು ಬಳಸಿ ನಿರ್ಮಿಸಲಾಗಿದೆ. ಪಟಾಕಿ ಕಿಚನ್ ಅಲ್ಲಿ ರಘು ಅವರೇ ಮೊದಲ ಅಡುಗೆ ಮಾಡಿದ್ದಾರೆ.

