ಬಿ.ಜೆ.ಎಂ ಮಲ್ಲಾರು-ಮಜೂರು ಎಸ್.ಐ.ಆರ್ ಮಾಹಿತಿ ಹಾಗೂ ಕಾನೂನು ಮಾಹಿತಿ ಶಿಬಿರ

0
11

ಕಾಪು : ಬದ್ರಿಯ ಜುಮ್ಮಾ ಮಸ್ಜಿದ್ ಮಲ್ಲಾರು ಮಜೂರು ಎಸ್. ಐ. ಆರ್ ಮಾಹಿತಿ ಶಿಬಿರ ಹಾಗೂ ದೇಶದ ಕಾನೂನಿನ ಮಾಹಿತಿ ಕಾರ್ಯಕ್ರಮವು ಬಿ.ಜೆ.ಎಂ ಮಸ್ಜಿದ್ ಅಧ್ಯಕ್ಷರಾದ ಡಾ. ಫಾರೂಕ್ ಚಂದ್ರನಗರ ರವರ ಸಭಾ ಅಧ್ಯಕ್ಷತೆಯಲ್ಲಿ ನಡೆಯಿತು ತದ ನಂತರ ಮಾತನಾಡಿದ ಅವರು ಎಸ್.ಐ.ಆರ್ ಬಗ್ಗೆ ಮಾಹಿತಿ ತಿಳಿದು ಸರಕಾರದ ಆದೇಶದಂತೆ ದೇಶದ ಕಾನೂನು ಸಂವಿಧಾನಕ್ಕೆ ಸಹಕರಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಸ್ಜಿದ್ ಕತೀಬರಾದ ಅಬ್ದುಲ್ ರಶೀದ್ ಸಖಾಫಿ ಅಲ್-ಖಾಮಿಲ್ ನೆರವೇರಿಸಿದರು ತದ ನಂತರ ಮಾತನಾಡಿದ ಅವರು ಸಮಾಜ ಮುಖಿ ಹಾಗೂ ಜನಪರ ಕೆಲಸ ಕಾರ್ಯಕ್ರಮಗಳು ಮಾಡಿದಾಗ ಸಮಾಜ ಒಳ್ಳೆದಾಗುವುದು ಎಂದು ತಿಳಿಸಿದರು.

ಮಾಹಿತಿ ಶಿಬಿರದ ಬಗ್ಗೆ ಸಂಷಿಕ್ತವಾಗಿ ಮಾತನಾಡಿದ ನ್ಯಾಯವಾದಿ ಅಬ್ದುಲ್ ರೆಹಮಾನ್ ಭಾರತ ದೇಶದ ಕಾನೂನು ಸಂವಿಧಾನವನ್ನು ಅದೇ ರೀತಿ ಎಲ್ಲಾ ವಿಷಯಗಳನ್ನು ತಿಳಿದಿರುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಎಸ್ಐಆರ್ ಪ್ರಕ್ರಿಯೆಯಲ್ಲಿ ಎಲ್ಲರೂ ಸಂಪೂರ್ಣವಾಗಿ ಭಾಗವಹಿಸಬೇಕೆಂದು ಹೇಳಿದರು. ಮಸ್ಜಿದ್ ಆಡಳಿತ ಸಮಿತಿಯ ಅಧೀನದಲ್ಲಿ ನಡೆದ ಎಸ್.ಐ.ಆರ್ ಪ್ರತಿಯೊಂದು ಪ್ರಜೆಗಳು ಅವರವರ ಕರ್ತವ್ಯವನ್ನು ತಿಳಿದಿರುವುದು, ಸಮಾಜದಲ್ಲಿ ಪ್ರಜ್ಞೆಯನ್ನು ಮೂಡಿಸುವುದು, ಬೆಳೆದು ಬರುವ ಯುವಕರಲ್ಲಿ ಶಿಸ್ತು ಸಂಯಮವನ್ನು ಧಾರ್ಮಿಕ ಪ್ರಜ್ಞೆಯನ್ನು, ದೇಶದ ಕಾನೂನನ್ನು ಅರಿಯುವಂತೆ ಮಾಹಿತಿ ನೀಡುವುದು ಪ್ರತಿಯೊಂದು ಮೊಹಲ್ಲಾದ ಹಾಗೂ ಪಾಲಕರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು. ನಿಮ್ಮ ನಿಮ್ಮ ತಾಯಿನಾಡಿನ ಕಾನೂನನ್ನು ತಿಳಿದುಕೊಳ್ಳಿ ಎಂದು ಪ್ರವಾದಿ ಮಹಮ್ಮದ್ ಸುಲ್ಲಲ್ಲಾಮ್ ಅಂದೇ ಹೇಳಿದ್ದರು.

ಈ ಸಂದರ್ಭದಲ್ಲಿ ಬಿ.ಜೆ.ಎಂ ಉಪಾಧ್ಯಕ್ಷರಾದ ಹಸನಬ್ಬ ಮಜೂರು ಕಾರ್ಯದರ್ಶಿ ರಜಬ್ ಕರಂದಾಡಿ,ಕೋಶಾಧಿಕಾರಿ ಪಿ.ಎಂ ಇಬ್ರಾಹಿಂ ಪಾದೂರು, ಸದಸ್ಯರು ಗಳಾದ ರಝಕ್ ಕೊಪ್ಪಲ್ತೋಟ, ಹಸನಬ್ಬಪಕೀರಣಕಟ್ಟೆ, ರಝಕ್ ಕೊಪ್ಪ , ಅಬ್ದುಲ್ಲ ಚಂದ್ರನಗರ ಹಾಗೂ ಇನ್ನಿತರ ಹಲವಾರು ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here