ಕಾರ್ಕಳ : ರಾಜ್ಯ ಕಾಂಗ್ರೆಸ್ ಸರಕಾರ ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ ಎಂದು ಆರೋಪಿಸಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಎಲ್ಲಾ ಕಡೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ಜರುಗಿತು.
ಶನಿವಾರ ಕಾರ್ಕಳ ಪುರಸಭೆ ಆವರಣದಲ್ಲಿ ಜರುಗಿದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕಾರ್ಕಳ ಬಿಜೆಪಿ ಕ್ಷೇತ್ರ ಅಧ್ಯಕ್ಷ ನವೀನ್ ನಾಯಕ್ ಕಳೆದ ಎರಡು ವರ್ಷಗಳಿಂದ ರಾಜ್ಯ ರಾಜಕಾರಣದಿಂದ ಯಾವುದೇ ಗ್ರಾಮ ಪಂಚಾಯತ್ ಹಾಗೂ ಪುರಸಭೆಗಳಿಗೆ ರಾಜ್ಯ ಸರಕಾರದಿಂದ ಅನುದಾನ ಬಂದಿಲ್ಲ ಇಡೀ ರಾಜ್ಯದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಕೆಗಳು ಕುಂಟಿತ ಆಗಿದೆ.
ಕಾರ್ಕಳದ ಕಾಂಗ್ರೆಸ್ ಗೆಳೆಯರು ಶಾಸಕರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು ಆದರೆ ವಾಸ್ತವದಲ್ಲಿ ಅವರದ್ದೇ ಸರಕಾರ ಅನುದಾನ ನೀಡದೆ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದೆ ಎಂದು ಹೇಳಿದರು.
ಶಾಸಕ ವಿ ಸುನಿಲ್ ಕುಮಾರ್ ಅವರು ಅಧಿಕಾರಕ್ಕೆ ಬಂದ ಆನಂತರ ಕಾರ್ಕಳದ ಹಳ್ಳಿಹಳ್ಳಿ ಗಳ ಸಂಪರ್ಕ ರಸ್ತೆಗಳು ಅಭಿವೃದ್ಧಿ ಹೊಂದಿವೆ ಅನೇಕ ಕಡೆಗಳಲ್ಲಿ ರಸ್ತೆ ಕಾಂಕ್ರೀಟ್ ಕರಣಗೊಂಡು ಮೂಲ ಸೌಕರ್ಯ ಸುಧಾರಿಸಿದೆ ಆದರೆ ಕಾಂಗ್ರೆಸ್ ಸರಕಾರವು ರಾಜಕೀಯ ದ್ವೇಷಕ್ಕಾಗಿ ನಿಟ್ಟಿ ಜವಳಿ ಪಾರ್ಕ್ ನಂತಹ ಮಹತ್ವದ ಯೋಜನೆಗಳ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದರು.
ಇತ್ತೀಚೆಗೆ ಕಾರ್ಕಳಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿಗಳು ಕ್ಷೇತ್ರಕ್ಕೆ ಯಾವುದೇ ಶಾಶ್ವತ ಯೋಜನೆಗಳನ್ನು ಘೋಷಿಸಿದೆ ಜನರಿಗೆ ನಿರಾಶೆ ಮೂಡಿಸಿದ್ದಾರೆ ಇದೊಂದು ವರ್ಥ್ಯ ಭೇಟಿಯಾಗಿದೆ.
ಎಂದು ಟೀಕಿಸಿದ ಅವರು ಕಾರ್ಕಳದಲ್ಲಿ ಕಾಂಗ್ರೆಸ್ ಪಕ್ಷದ ನಾಟಕ ಕಂಪನಿಯ ಆಟಗಳು ಈಗ ಜನರಿಗೆ ಅರ್ಥವಾಗಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ ಹೆಗಡೆ ಟೀಕಿಸಿದರು.
ಪಕ್ಷದ ಮುಖಂಡರಾದ ನಿರಂಜನ ಜೈನ್, ಬೋಳ ಸತೀಶ್ ಪೂಜಾರಿ, ಪ್ರಕಾಶ್ ರಾವ್, ಶ್ರೀನಿವಾಸ ಕಾರ್ಕಳ, ಜಿ ರಾಮ ಚಂದ್ರ ನಾಯಕ್, ವಿಗ್ನೇಶ್ ಪ್ರಸಾದ್, ಯೋಗೀಶ್ ದೇವಾಡಿಗ,
ವಿಜೇಂದ್ರ ಕಿಣಿ, ಸೇರಿದಂತೆ ಹಲವು ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದು ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

