ಮೂಲ್ಕಿ ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ಯೂತ್ ಕ್ಲಬ್ ವತಿಯಿಂದ ಶಾಲಾ ಮಕ್ಕಳಿಗೆ ಬರೆಯುವ ಪುಸ್ತಕ ವಿತ್ತರಣೆಯನ್ನು ಮೇ 25ರಂದು ಶ್ರೀ ಜಾರಂದಾಯ ಧೂಮಾವತಿ ದೈವಸ್ಥಾನದ ಅಂಗಣದಲ್ಲಿ ನಡೆಸಲಾಯಿತು. ಕೊಳಚಿಕಂಬಳ ಊರಿನ ಗುರಿಕಾರರಾದ ಹರಿಶ್ಚಂದ್ರ ಪಿ. ಸಾಲಿಯಾನ್‌ನವರು “ಮಕ್ಕಳಿಗೆ ವಿದ್ಯೆಯೊಂದಿಗೆ ಸಂಸ್ಕಾರವನ್ನುಕೊಡಬೇಕು. ಮಕ್ಕಳು ಶಿಸ್ತನ್ನು ಮೈಗೂಡಿಸಿಕೊಂಡು ಮುಂದೆ ಒಳ್ಳೆಯ ಶಿಕ್ಷಣ ಪಡೆದು ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಬೇಕೆಂದು ಹೇಳಿದರು.
ಸಮಾರಂಭದಲ್ಲಿ ಯೂತ್ ಕ್ಲಬ್‌ನ ಅಧ್ಯಕ್ಷ ಜೀವನ್ ಆರ್. ಕೋಟ್ಯಾನ್ ಮಹಿಳಾ ಮಂಡಳಿಯ ಅಧ್ಯಕ್ಷೆ ಲತಾ ಶೇಖರ್ ಕೋಟ್ಯಾನ್, ತೇಜಾ ಪೂಜಾರಿ, ಸಾನದ ಮನೆ ಕೃಷ್ಣ ಆರ್. ಕೋಟ್ಯಾನ್, ಕಾರ್ತಿಕ್ ಕೊಳಚಿಕಂಬಳ, ಕೃಷ್ಣ ಸುವರ್ಣ, ಪ್ರಪುಲ್ಲ, ಚರಣ್, ರಕ್ಷಿತ್ ಮುಂತಾದವರು ಉಪಸ್ಥಿತರಿದ್ದರು.