ಕಾಸರಗೋಡಿನಲ್ಲಿ ಗಡಿನಾಡು ಕನ್ನಡ ಸಮ್ಮೇಳನ-2026: ಕನ್ನಡ ಭವನದಲ್ಲಿ ಜುಲೈ 26ರಂದು ಮಹಾಸಂಗಮ

0
8

ಕಾಸರಗೋಡು : ಕೇರಳ ರಾಜ್ಯದ ಕಾಸರಗೋಡಿನ ಕನ್ನಡ ಭವನದ ರಜತ ಸಂಭ್ರಮ ಸಮಾರೋಪದ ಅಂಗವಾಗಿ ಹಾಗೂ ಡಾ. ಸಿದ್ರಾಮ ನೀಲಜಗಿ ಸಾರಥ್ಯದ ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಸಂಘ (ರಿ.), ಕರ್ನಾಟಕದ ಸಹಯೋಗದಲ್ಲಿ “ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ-2026” ಜುಲೈ 26ರಂದು ಕನ್ನಡ ಭವನ, ಪಿ.ಎಂ.ಎಸ್. ರಸ್ತೆ, ಕಾಸರಗೋಡಿನಲ್ಲಿ ನಡೆಯಲಿದೆ.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು ಹಾಗೂ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ. ಸಿ. ಸೋಮಶೇಖರ್ ಅವರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕನ್ನಡ ಮೆರವಣಿಗೆ, ಉದ್ಘಾಟನಾ ಸಮಾರಂಭ, ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ, ಕವಿಗೋಷ್ಠಿ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಈ ಸಂದರ್ಭದಲ್ಲಿ ಕನ್ನಡ ಭವನದ ಪ್ರತಿಷ್ಠಿತ ಪ್ರಶಸ್ತಿಗಳಾದ “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ”, “ಕನ್ನಡ ಪಯಸ್ವಿನಿ ಅಚೀವ್‌ಮೆಂಟ್ ಅವಾರ್ಡ್-2026”, “ಕನ್ನಡ ಭವನ ಸಮಾಜ ಸೇವಾರತ್ನ ಪ್ರಶಸ್ತಿ” ಹಾಗೂ **“ಭರವಸೆಯ ಬೆಳಕು ಶಿಕ್ಷಣ ರತ್ನ ಪ್ರಶಸ್ತಿ”**ಗಳನ್ನು ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರದಾನ ಮಾಡಲಾಗುವುದು.

LEAVE A REPLY

Please enter your comment!
Please enter your name here