ಬಂಟರ ಸಂಘ ಬೆಂಗಳೂರು 2026–29: ಅಧ್ಯಕ್ಷರಾಗಿ ಡಾ. ದೀಪಕ್ ಶೆಟ್ಟಿ ಸಹಿತ ಪದಾಧಿಕಾರಿಗಳ ಆಯ್ಕೆ

0
38

-ಮಂದಾರ ರಾಜೇಶ್

ಬೆಂಗಳೂರು : ಪ್ರತಿಷ್ಠಿತ ಬಂಟರ ಸಂಘ ಬೆಂಗಳೂರುದ 2026–29ನೇ ಸಾಲಿನ ನೂತನ ಆಡಳಿತ ಮಂಡಳಿ ಹಾಗೂ ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಯಿತು.

ಬೆಂಗಳೂರು ಬಂಟರ ಸಂಘದ ಆವರಣ ಹಾಗೂ ಮುಲ್ಕಿ ಸುಂದರರಾಮ್ ಶೆಟ್ಟಿ ಮೆಮೋರಿಯಲ್ ಎಂ.ಎಸ್.ಆರ್.ಎಸ್. ನಗರ ಟ್ರಸ್ಟ್ ಹಾಲ್‌ನಲ್ಲಿ ಏಕಕಾಲದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಆಡಳಿತ ಮಂಡಳಿಗೆ ಡಾ. ದೀಪಕ್ ಶೆಟ್ಟಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಧುಕರ್ ಎಂ. ಶೆಟ್ಟಿ ಹಾಗೂ ಸೌಮ್ಯಪ್ರಿಯ ಹೆಗ್ಡೆ ಅವರು ಉಪಾಧ್ಯಕ್ಷರಾಗಿ, ಅಮರನಾಥ ಶೆಟ್ಟಿ ಅವರು ಗೌರವ ಕಾರ್ಯದರ್ಶಿಯಾಗಿ, ಸುರೇಖಾ ಶೆಟ್ಟಿ ಅವರು ಜತೆ ಕಾರ್ಯದರ್ಶಿಯಾಗಿ ಹಾಗೂ ರಮಿತ್ ಬಿ. ಶೆಟ್ಟಿ ಅವರು ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅನಿತಾ ಪಿ. ಭಂಡಾರಿ, ಅರುಣ್ ಕುಮಾರ್ ಶೆಟ್ಟಿ ಎಚ್., ಸಿ.ಎ. ಚಂದ್ರಶೇಖರ್ ಶೆಟ್ಟಿ, ಹೀರಾ ಅನುಪ್ ಹೆಗ್ಡೆ, ಕೀರ್ತನ್ ಶೆಟ್ಟಿ, ಸಿ.ಎ. ಕಿಶೋರ್ ಶೆಟ್ಟಿ, ಮಾಲತಿ ಜೆ. ಶೆಟ್ಟಿ, ನಿತ್ಯರಂಜನ್ ಶೆಟ್ಟಿ, ಪ್ರಸಾದ್ ಕುಮಾರ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಎಸ್., ಪ್ರತಾಪ್ ಶೆಟ್ಟಿ, ರಾಮದಾಸ್ ಶೆಟ್ಟಿ ಕೆ.ಎಸ್. ಶಕುಂತಳ ಶೆಟ್ಟಿ, ಸುರೇಂದ್ರ ಶೆಟ್ಟಿ ಎಚ್. ಹಾಗೂ ಉಮೇಶ್ ಪೂಂಜ ಡಿ. ಅವರು ಆಯ್ಕೆಯಾಗಿದ್ದಾರೆ.

ನೂತನ ಆಡಳಿತ ಮಂಡಳಿಯು ಬಂಟರ ಸಂಘದ ಸಂಘಟನಾತ್ಮಕ ಬೆಳವಣಿಗೆ, ಸದಸ್ಯರ ಕಲ್ಯಾಣ ಹಾಗೂ ಸಂಘಕ್ಕೆ ಸಂಬಂಧಿಸಿದ ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಮತ್ತಷ್ಟು ಅಭಿವೃದ್ಧಿಗೆ ಆದ್ಯತೆ ನೀಡಲಿದೆ. ಸಂಘ ಹಾಗೂ ಶಾಲೆಯ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ವಿವಿಧ ಯೋಜನೆಗಳನ್ನು ರೂಪಿಸಿ, ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿ ನೂತನ ಆಡಳಿತ ಮಂಡಳಿ ತಿಳಿಸಿದೆ.

ಸಂಘದ ಸದಸ್ಯರು, ಸಮಾಜದ ಮುಖಂಡರು ಹಾಗೂ ಹಿತೈಷಿಗಳ ಸಹಕಾರದೊಂದಿಗೆ ಸಂಘದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುವ ಉದ್ದೇಶವನ್ನು ನೂತನ ತಂಡ ಹೊಂದಿದೆ. ಸದಸ್ಯರ ಅಗತ್ಯತೆಗಳಿಗೆ ಸ್ಪಂದಿಸುವುದು, ಸಂಘದ ಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ವಿಸ್ತರಿಸುವುದು ಹಾಗೂ ಮುಂದಿನ ಪೀಳಿಗೆಗೆ ಉಪಯುಕ್ತವಾಗುವ ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ತಮ್ಮ ಅಮೂಲ್ಯ ಸಹಕಾರ, ಬೆಂಬಲ ಹಾಗೂ ಮತವನ್ನು ನೀಡಿದ ಎಲ್ಲಾ ಸದಸ್ಯರಿಗೆ ನೂತನ ಆಡಳಿತ ಮಂಡಳಿಯು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದೆ. 2026–29ನೇ ಸಾಲಿನ ಅವಧಿಯಲ್ಲಿಯೂ ಸಂಘದ ಎಲ್ಲಾ ಸದಸ್ಯರು ಇದೇ ರೀತಿಯ ಸಹಕಾರ ಮತ್ತು ಬೆಂಬಲವನ್ನು ಮುಂದುವರಿಸುವಂತೆ ಮನವಿ ಮಾಡಲಾಗಿದೆ.