ಅಂದರ್‌-ಬಾಹರ್‌ ಜುಗಾರಿ ಅಡ್ಡೆಗೆ ಮಣಿಪಾಲ ಪೊಲೀಸರ ದಾಳಿ

0
88

ಮಣಿಪಾಲ : ಇಂದ್ರಾಳಿ ರೈಲ್ವೆ ಗೋಡೌನ್‌ ಆವರಣದಲ್ಲಿ ಅಂದರ್‌-ಬಾಹರ್‌ ಇಸ್ಪೀಟ್ ಜುಗಾರಿ ಆಡುತ್ತಿದ್ದ ಆರೋಪದ ಮೇರೆಗೆ ಆರು ಮಂದಿಯನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವಶಕ್ಕೆ ಪಡೆದವರನ್ನು ಮಲ್ಲಿಕಾರ್ಜುನ ಬಸವನಗೌಡ, ಭರತ್ ಕುಮಾರ್ ಬಿ.ಎಚ್., ವಸಂತ ಕೋಟ್ಯಾನ್, ಜಗದೀಶ ಮಲ್ಲಪ್ಪ ಕಟಾಪುರ, ಅಮೀತ್ ಬಿ. ಹಾಗೂ ಶಿವಕುಮಾರ್ ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ₹6,690 ನಗದು ಹಾಗೂ ಜುಗಾರಿಗೆ ಬಳಸಿದ್ದ ಇಸ್ಪೀಟ್ ಎಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.