ಕಾರ್ಕಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನಂತಶಯನ ಒಕ್ಕೂಟದ ಅಧ್ಯಕ್ಷರಾದ ಸುಧಾಕರ್ ದಾನಶಾಲೆ ಇವರು ಕಾಬೆಟ್ಟು ಸಮೀಪದ ರಮೇಶ್ (ಕ್ಯಾನ್ಸರ್ ಪೀಡಿತರು) ಎಂಬವರಿಗೆ ಆರ್ಥಿಕ ನೆರವು ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಹಾಗೂ ಯೋಜನೆಯ ಮೇಲ್ವಿಚಾರಕರು ಉಪಸ್ಥಿತರಿದ್ದರು.

