ಕಾಪು : ದೇಶದ ಪ್ರಧಾನಿ ನರೇಂದ್ರ ಮೋದಿಯವರ ಸಂವಿಧಾನಿಕ ಹುದ್ದೆಯ ಸಾರ್ವಜನಿಕ ಸೇವೆಗೆ 25 ವರ್ಷಗಳು ತುಂಬುವ ಹಿನ್ನಲೆಯಲ್ಲಿ ಸೆ. 17 ರಂದು ಆಶೀರ್ವಾದ ದೀಪ ಕಾರ್ಯಕ್ರಮ ಕುತ್ಯಾರು ಪರಿಶಿಷ್ಟ ಪಂಗಡ ಕಾಲೆನಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅಧ್ಯಕ್ಷತೆಯಲ್ಕಿ ಜರಗಿತು..ಪರಿಶಿಷ್ಟ ಪಂಗಡದ ಗುರಿಕಾರರಾದ ಬಾಬು ಕೊರಗ ಹಾಗೂ ಭಾಸ್ಕರ ಕೊರಗ ದೀಪ ಬೆಳಗಿಸಿ ಉದ್ಘಾಟಿಸಿದರು.
ಶಿರ್ವ ಸಹಕಾರಿ ವ್ಯವಸಾಯಿಕ ಸಂಘ (ರಿ )ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ ಮಾತನಾಡಿ ಮೋದಿಯಂತಹ ಪ್ರಧಾನಿ ನಮಗೆ ದೊರೆತಿರುವುದು ನಮ್ಮೆಲ್ಲರ ಭಾಗ್ಯ,ದೇಶದ ಎಲ್ಲಾ ನಾಗರಿಕರನ್ನು ಸಮಾನರಂತೆ ಕಾಣುವ ದೇಶವನ್ನು ಮುನ್ನನೆಡೆಸಿರುತಿರುವ ಅವರಿಗೆ ದೇವರು ದೀರ್ಘ ಆಯುಷ್ಯ ನೀಡಲಿ ಎಂದರು.
ಈ ಸಂದರ್ಭದಲ್ಲಿ ಕುತ್ಯಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಧೀರಜ್ ಶೆಟ್ಟಿ, ಲತಾ ಆಚಾರ್ಯ, ಮಾಜಿ ಪಂಚಾಯತ್ ಸದಸ್ಯರು ಸಂಪತ್ ಕುಮಾರ್,ಲೀಗ್ನೆಸ್ ಮಥಾಯಸ್,ಪಕ್ಷದ ಪ್ರಮುಖರಾದ ಸುಶಾಂತ್ ಶೆಟ್ಟಿ, ಧೀರಜ್ ಕುಲಾಲ್,ಪೂರ್ಣ ಚಂದ್ರ ಕುಲಾಲ್,ಜಯ ಶೆಟ್ಟಿ, ಕೃಷ್ಣ ಶೆಟ್ಟಿ,ಪ್ರವೀಣ್ ಆಚಾರ್ಯ,ಅಭಿಷೇಕ್ ಆಚಾರ್ಯ,ಪರಿಶಿಷ್ಟ ಕಾಲೆನಿ ನಿವಾಸಿಗಳು ಉಪಸ್ಥಿತರಿದ್ದರು.
ಕುತ್ಯಾರು ನವೀನ್ ಶೆಟ್ಟಿ -ಪ್ರಧಾನಿಯವರು ಧಕ್ಷ ನಾಯಕತ್ವದ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ (ಪ್ರಗತಿಗೆ )ವಿಶೇಷ ಕೊಡುಗೆ ನೀಡಿದ್ದು ಮುಖ್ಯವಾಗಿ ಅನ್ನಭಾಗ್ಯ, ಅಯುಷ್ಮಾನ್ ನಂತಹ ಸೇವೆಯಿಂದ ಬಡಜನರ ಒಳಿತಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ, ಅವರಿಗೆ ನಿಮ್ಮೆಲ್ಲರ ಆಶೀರ್ವಾದವಾದದ ಅಗತ್ಯತೆ ಇದೆ ಎಂದರು.

