ಭಾರತೀಯ ರೆಡ್ ಕ್ರಾಸ್ ಸೊಸೈಟಿ ನವ ದೆಹಲಿ ಇದರ ರಾಷ್ಟ್ರೀಯ ನಿರ್ವಹಣಾ ಮಂಡಲಿ ಇದರ ಸದಸ್ಯರಾದ ಡಾ ಮುರಲೀ ಮೋಹನ್ ಚೂಂತಾರು ಅವರು ದಿನಾಂಕ 17/09/2026ರಂದು ಸರ್ಕಾರಿ ವೆನ್ ಲಾಕ್ ಆಸ್ಪತ್ರೆ ಮಂಗಳೂರು ಇದರ ರಕ್ತ ನಿಧಿಗೆ ಭೇಟಿ ನೀಡಿದರು. ಪೆಥಾಲಜಿ ವಿಭಾಗದ ಮುಖ್ಯಸ್ಥರಾದ ಶ್ರೀ ಡಾ ಶರತ್ ಕುಮಾರ್ ರಾವ್ ಅವರು ಬಳಿ ರಕ್ತದ ಲಭ್ಯತೆ ಬಗ್ಗೆ ವಿಚಾರ ವಿನಿಮಯ ಮಾಡಿದರು. ಬಳಿಕ ಡಾ ಚೂಂತಾರು ರಕ್ತದಾನ ಮಾಡಿದರು ಮತ್ತು ಜನರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಕರೆ ನೀಡಿದರು. ಈ ಸಂದರ್ಭದಲ್ಲಿ ರಕ್ತ ನಿಧಿಯ ಆಂಟೋನಿ ಉಪಸ್ಥಿತರಿದ್ದರು.

