ರಾಮಕೃಷ್ಣ ಮಠದಲ್ಲಿ ಜುಲೈ 29ರಂದು ಶ್ರೀ ಗುರುಪೂರ್ಣಿಮೆ ಆಚರಣೆ ಹಾಗೂ ಯಕ್ಷಕಲಾರಾಧನೆ

0
4

ರಾಮಕೃಷ್ಣ ಮಠ, ಮಂಗಳೂರಿನಲ್ಲಿ ಜುಲೈ 29, ಬುಧವಾರ ಶ್ರೀ ಗುರುಪೂರ್ಣಿಮೆಯ ಅಂಗವಾಗಿ ವಿವಿಧಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಅಂದುಬೆಳಗ್ಗೆ 9ಗಂಟೆಗೆ ವೇದಪಾರಾಯಣ, ವಿಷ್ಣುಸಹಸ್ರನಾಮ ಪಾರಾಯಣ, ವಿಶೇಷ ಪೂಜೆ, ಅರ್ಚನೆ, ಭಜನೆ, ಆಧ್ಯಾತ್ಮಿಕ ಪ್ರವಚನ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಲಿವೆ.

ಮಧ್ಯಾಹ್ನ 1.00 ಗಂಟೆಗೆ”ಸತ್ಯಂ ಶಿವಂ ಸುಂದರಂ–ನವರಸಯಕ್ಷೋತ್ಸವ “ಶೀರ್ಷಿಕೆಯಡಿ ಯಕ್ಷಕಲಾರಾಧನೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್ ಮತ್ತು ಬಳಗ ಹಿಮ್ಮೇಳವನ್ನು ನಡೆಸಲಿದ್ದು, ಪ್ರಶಾಂತ್‌ಆಚಾರ್ ಮದ್ದಳೆ ಹಾಗೂ ಪ್ರಶಾಂತ್ ಮುಂಡಾಡಿ ಚೆಂಡೆ ವಾದನ ಮಾಡಲಿದ್ದಾರೆ.

ಮುಮ್ಮೇಳದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ, ತೋಟಿಮನೆ ಗಣಪತಿ ಹೆಗಡೆ, ನೀಲ್ಕೋಡು ಶಂಕರ ಹೆಗಡೆ, ಶಶಿಕಾಂತ ಶೆಟ್ಟಿ ಕಾರ್ಕಳ, ಚಪ್ಪರಮನೆ ಶ್ರೀಧರ ಹೆಗಡೆ ಹಾಗೂ ಕಾರ್ತಿಕ್‌ ಚಿಟ್ಟಾಣಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಸಮನ್ವಯವನ್ನು ಕಬ್ಬಿನಾಲೆ ವಸಂತ ಭಾರಧ್ವಾಜ್ ವಹಿಸಲಿದ್ದಾರೆ.

ಶ್ರೀ ಗುರುಪೂರ್ಣಿಮೆಯ ಈ ಪವಿತ್ರ ಕಾರ್ಯಕ್ರಮಗಳಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳುವಂತೆ ರಾಮಕೃಷ್ಣ ಮಠ, ಮಂಗಳೂರು ಕೋರಿದೆ.