ಹಿಂದು ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ವಿದ್ಯಾದಾಯಿನೀ ಆಂಗ್ಲ ಮಾಧ್ಯಮ ಶಾಲೆ CBSE ಇಡ್ಯಾ ಸುರತ್ಕಲ್ ನಲ್ಲಿ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವು ಶಾಲೆಯ ಪ್ರಾಂಶುಪಾಲರು ಡಾ ಶಶಿಕುಮಾರ್ ಕೆ ಸಿ ರವರ ಅಧ್ಯಕ್ಷತೆಯಲ್ಲಿ ಜರಗಿತ್ತು.
ಆಡಳಿತ ಮಂಡಳಿಯ ಅಧ್ಯಕ್ಷರು ಜಯಚಂದ್ರಹತ್ವಾರ್ ರವರು ಶಿಕ್ಷಕರು ಶಾಲಾ ಆಡಳಿತ ಮಂಡಳಿಯ ಬೆನ್ನೆಲುಬು ಎಂದು ಶ್ಲಾಘನೆ ವ್ಯಕ್ತ ಪಡಿಸಿ ಶಿಕ್ಷಕರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದರು. ಜನ ಮೆಚ್ಚಿದ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಕೆ ಕಲಾವತಿ ರವರನ್ನು ಅಭಿನಂದಿಸಲಾಯಿತು.

ಕೆ ಕಲಾವತಿ ಯವರು ಶಿಕ್ಷಕರ ಸನ್ಮಾರ್ಗದರ್ಶನದಲ್ಲಿ ಮಕ್ಕಳ ಜೀವನ ಸಾಗಿದಾಗ ಸಾರ್ಥಕವಾಗುವುದು ಎಂದು ತಿಳಿಸಿ ಶಿಕ್ಷಕರು ಮುಂದೆ ಮಕ್ಕಳು ಹಿಂದೆ ಜೊತೆಯಾಗಿ ಸಾಗುವುದು ಒಳಿತು ಎಂದು ಹಿತ ನುಡಿದರು. ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀನಿವಾಸ ಕುಳಾಯಿ ಶಿಕ್ಷಕರು ನೀಡುವ ಜ್ಞಾನ ಮಕ್ಕಳ ಬದುಕಿಗೆ ಬೆಳಕಾದರೆ ಶಿಕ್ಷಕರು ನೀಡುವ ಮಾರ್ಗದರ್ಶನ ಮಕ್ಕಳ ಹೆಜ್ಜೆಗಳಿಗೆ ದಿಕ್ಕಾಗುತ್ತದೆ ಎಂದು ಗುರು ನಮನ ಸಲ್ಲಿಸಿದ್ದರು.
ಸಮಾರಂಭದ ಅಧ್ಯಕ್ಷರು ಡಾ ಶಶಿಕುಮಾರ್ ಕೆ ಸಿ ರವರು ಶಿಕ್ಷಕರು, ಪೋಷಕರು, ಮಕ್ಕಳು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದು ಅಭಿನಂದನೀಯರು ಎಂದು ಪ್ರಶಂಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಪ್ರವೀಣ್ ಸಿಪ್ರಿ ರವರು ಸ್ವಾಗತಿಸಿದ್ದು ದೀಪಾ ಶೆಟ್ಟಿ ರವರು ಧನ್ಯವಾದಗಳನ್ನು ನೀಡಿದ್ದರು. ರಕ್ಷಕ ಶಿಕ್ಷಕ ಸಂಘದ ನಿಕಟಪೂರ್ವ ಅಧ್ಯಕ್ಷರು ಡಾ ರಚನಾ ಕೊರಕೋಡು ರವರು ಕಾರ್ಯಕ್ರಮ ನಿರೂಪಣೆ ಮಾಡಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿದ್ದು, ಮನರಂಜನೆ ಕಾರ್ಯಕ್ರಮ ಜರಗಿತ್ತು.

