ಯುವ ಸಮುದಾಯದ “ವೈಬ್ ಫೆಸ್ಟ್ ‘ಕಾರ್ಯಕ್ರಮ ಬಿಲ್ಲವ ಸಮಾಜದ ಒಗ್ಗಟ್ಟನ್ನು ಪ್ರದರ್ಶಿಸಿದೆ: ಸೂರ್ಯಕಾಂತ್ ಜಯ ಸುವರ್ಣ
ಮುಂಬಯಿ : ಜಯ ಸಿ ಸುವರ್ಣ ಅಭಿಮಾನಿಗಳು ಯುವ ವಿಭಾಗ., ಮುಂಬಯಿ ಬಿಲ್ಲವರು ಶ್ರೀ ನಾರಾಯಣ ಗುರು ಭಜನಾ ಮಂಡಲ್( ರಿ ) ಮುಂಬೈ ಇದರು ಜಂಟಿ ಆಯೋಜನೆಯಲ್ಲಿ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ನಡೆದ ವೈಬ್ ಫೆಸ್ಟ್ 2026 ಕಾರ್ಯಕ್ರಮ ಅಭೂತಪೂರ್ವ ಯಶಸ್ವಿಯಾಗಿ ನಡೆಯುವಲ್ಲಿ ಸಹಕರಿಸಿದ ಎಲ್ಲ ಸಮಾಜ ಬಾಂಧವರಿಗೆ ಕೃತಜ್ಞತೆ ಸಲ್ಲಿಸುವ “ಧನ್ಯೋತ್ಸವ” ಕಾರ್ಯಕ್ರಮ ಇತ್ತೀಚೆಗೆ ಗೊರೇಗಾoವ್ ಪೂರ್ವದ ಲೀಲಾಸ್ ಬ್ಯಾಂಕ್ವೆಟ್ ಹಾಲ್ ನಲ್ಲಿ ಅಭಿಮಾನಿಗಳ ಅಧ್ಯಕ್ಷ.
ಭಾರತ್ ಕೋ-ಆಪ್. ಬ್ಯಾಂಕ್ (ಮುಂಬೈ) ಲಿಮಿಟೆಡ್ನ ಕಾರ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ಬಿಲ್ಳವರ ಮಹಾಮಂಡಲ ಮೂಲ್ಕಿ ಅಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಅವರು ಅಧ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಯುವ ಸಮುದಾಯದ ಉತ್ಸವ ಬಿಲ್ಲವ ಸಮಾಜದ ಸಂಘಟನಾ ಶಕ್ತಿಯನ್ನು ಪ್ರದರ್ಶಿಸಿದೆ. ಎಲ್ಲಿ ಬಿಲ್ಲವರು ಒಗ್ಗಟ್ಟಾಗುತ್ತಾರೋ ಅಲ್ಲಿ ಬಿಲ್ಲವ ಭವನ . ಜಯ ಸುವರ್ಣ ರ ಹೆಸರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಂಟರ ಭವನ ಸೇರಿಕೊಂಡಿದ್ದಾರೆ. ಇದು ಬಿಲ್ಲವರ ಶಕ್ತಿ ಜಯ ಸುವರ್ಣರ ಮೇಲಿಟ್ಟಿರುವ ಅಭಿಮಾನ. ಇದರಿಂದ ಬೇರೆ ಬೇರೆ ಸಮಾಜದ ಬಂಧುಗಳಿಗೆ ಬಿಲ್ಲವರ ಒಗ್ಗಟ್ಟಿನ ತಿಳಿದಂತಾಗಿದೆ. ನಮ್ಮ ಒಗ್ಗಟ್ಟು ನಿರಂತರವಾಗಿರಬೇಕು. ಯಾರನ್ನು ದ್ವೇಷಿಸದಿರಿ. ನಮ್ಮ ಕರ್ತವ್ಯದ ಕೆಲಸಗಳನ್ನು ಮಾಡುತ್ತಾ ಸಮಾಜವನ್ನು ಒಗ್ಗಟ್ಟು ಮಾಡುವ . ನೀವೆಲ್ಲರೂ ಕಾರ್ಯಕ್ರಮದ ಯಶಸ್ವಿಗೆ ಶಕ್ತಿ ತುಂಬಿದ್ದೀರಿ ಎಂದು ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದ ಬಗ್ಗೆ ಮಾತನಾಡಿದ ಯುವ ವಿಭಾಗದ ಕಾರ್ಯಧ್ಯಕ್ಷ ಗಣೇಶ್ ಪೂಜಾರಿ ಜಯ ಸುವರ್ಣರ ಮೇಲೆ ಅಭಿಮಾನ ಮತ್ತು ಗೌರವ ದಿಂದಾಗಿ ಸಾವಿರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಬಂಟರ ಭವನದಲ್ಲಿ ಸೇರಿಕೊಂಡಿದ್ದೀರಿ ಬಹಳಷ್ಟು ಅಡಚಣೆಗಳು ತಮಗೆ ಆಗಿರಬಹುದು. ನಾವು ಊಹಿಸಲು ಅಸಾಧ್ಯವಾಗಿಲ್ಲ ಅಷ್ಟೊಂದು ಸಂಖ್ಯೆಯಲ್ಲಿ ಸಮಾಜ ಬಾಂಧವರು ತಮ್ಮ ಅಮೂಲ್ಯ ಸಮಯವನ್ನು ನೀಡಿದ್ದೀರಿ ನಮ್ಮ ಒಗ್ಗಟ್ಟು ಪ್ರದರ್ಶನವಾಗಿದೆಂತಾಗಿದೆ. ನಿಮ್ಮೆಲ್ಲರ ಸಹಕಾರ ಮತ್ತು ನಮ್ಮ ಒಗ್ಗಟ್ಟು ನಿರಂತರ ಹೀಗೆ ಇರಲಿ ಎಂದು ನುಡಿದರು.
ಅಭಿಮಾನಿಗಳ ಉಪಾಧ್ಯಕ್ಷ ಗಂಗಾಧರ್ ಜೆ ಪೂಜಾರಿ ಮಾತನಾಡಿ ಜಯ ಸುವರ್ಣರು ಸಮಾಜಕ್ಕೆ ನೀಡಿರುವ ಕೊಡುಗೆ ಮತ್ತು ಅವರ ಸಂಘಟನಾ ಶಕ್ತಿ ದೇಶದಾದ್ಯಂತ ವಿರುವ ಬಿಲ್ಲವ ಸಮಾಜ ಬಂದುಗಳಿಗೆ ತಿಳಿದಿದೆ. ನಮ್ಮ ಒಗ್ಗಟ್ಟು ಹೀಗೆ ನಿರಂತರವಾಗಿರಬೇಕು. ಸಮಾಜದ ಆಸೋತ್ತರಗಳಿಗೆ ನಿರಂತರ ನಾವು ಸ್ಪಂದಿಸುತ್ತೇವೆ. ನಮ್ಮ ನಾಯಕರಾಗಿರುವ ಸೂರ್ಯಕಾಂತ್ ಜಯ ಸುವರ್ಣರು ನೇತೃತ್ವದಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಡೆಯಲಿದೆ ಎಂದರು.
ನಾರಾಯಣ ಗುರು ಭಜನ ಮಂಡಳಿಯ ಅಧ್ಯಕ್ಷ ಅಶೋಕ್ ಕುಕ್ಯಾನ್ ಸಸಿಹಿತ್ಲು ಸಮಾಜ ಬಾಂಧವರಿಗೆ ಕೃತಜ್ಞತೆ ಸಲ್ಲಿಸಿ ನಮ್ಮ ಒಗ್ಗಟ್ಟು ಮುಂದೆ ನಡೆಯಲಿದೆ.
. ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಸೇರಿಕೊಂಡಾಗ ಹಲವಾರು ತೊಂದರೆಗಳಾಗಿರಬಹುದು. ಆದರೆ ಯಾರೂ ಕೂಡ ಅದನ್ನು ಮನಸ್ಸಿನಲ್ಲಿ ಇರಿಸದೆ ರಾತ್ರಿವರೆಗೆ ಸಾವಿರಾರು ಸಂಖ್ಯೆಯಲ್ಲಿ ತಮ್ಮ ಸಮಯವನ್ನು ನೀಡಿದ್ದೀರಿ ನಿಮಗೆಲ್ಲರಿಗೂ ಕೃತಜ್ಞತೆಗಳು ಎಂದರು.
ವೇದಿಕೆಯಲ್ಲಿ ಸಮಾಜದ ಮುಖಂಡರಾದ ಲಕ್ಷ್ಮಣ್ ಪೂಜಾರಿ. ಜಗನ್ನಾಥ್ ವಿ ಕೋಟ್ಯಾನ, ಜಯ ಸುವರ್ಣ ಅಭಿಮಾನಿಗಳು ಕಾರ್ಯದರ್ಶಿ ಮೋಹನ್ ದಾಸ್ ಜಿ ಪೂಜಾರಿ, ನಾರಾಯಣ ಗುರು ಭಜನ ಮಂಡಳಿಯ ಗೌರವ ಪ್ರಧಾನ ಕಾರ್ಯದರ್ಶಿ ಕೇಶವ್ ಎಸ್. ಪೂಜಾರಿ. ಜಯ ಸಿ. ಸುವರ್ಣ ಯುವ ಅಭಿಮಾನಿಗಳ ಕಾರ್ಯದರ್ಶಿ ಗಣೇಶ್ ಎಸ್. ಪೂಜಾರಿ , ಜಯ ಸಿ ಸುವರ್ಣ ಮಹಿಳಾ ಅಭಿಮಾನಿಗಳ ಕಾರ್ಯದರ್ಶಿ ಸಬಿತಾ ಜಿ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಲತೀಶ್ ಪೂಜಾರಿ ಧನಂಜಯ ,ಶಾಂತಿ ಚಿನ್ಮಯ್ ಸಾಲ್ಯಾನ್ ಮತ್ತಿತರರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಕಾರ್ಯಕ್ರಮವನ್ನು ಶಶಿಧರ್ ಬಂಗೇರ ಮಟ್ಟು ನಿರೂಪಿಸಿ ವಂದಿಸಿದರು.

