ಉಡುಪಿ : ಚಿಟ್ಪಾಡಿ ಹನುಮಾನ್ ಗ್ಯಾರೇಜ್ಗೆ ಹೋಗುವ ರಸ್ತೆಯ ಬಸ್ ನಿಲ್ದಾಣದಲ್ಲಿ ಅಪರಿಚಿತ ಯುವಕನೊಬ್ಬ ರಕ್ತ ವಾಂತಿ ಮಾಡಿ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರಾದ ಮಧುಕರ ನಾಯಕ್ ಅವರು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದರು.

ತಕ್ಷಣ ಸ್ಥಳಕ್ಕೆ ಧಾವಿಸಿದ ನಿತ್ಯಾನಂದ ಒಳಕಾಡು ಅವರು ಅಸ್ವಸ್ಥ ಯುವಕನನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಯುವಕನ ಹೆಸರು ಶಿವ, ವಯಸ್ಸು 23 ವರ್ಷ ಎಂದು ತಿಳಿದುಬಂದಿದ್ದು, ತಾನು ಬಾಗಲಕೋಟೆ ಜಿಲ್ಲೆಯವನು ಹಾಗೂ ಉಡುಪಿಯ ಬೀಡಿನಗುಡ್ಡೆ ಸಮೀಪ ವಾಸವಾಗಿರುವುದಾಗಿ ಹೇಳಿಕೊಂಡಿದ್ದಾನೆ.

ಯುವಕನ ವಾರಸುದಾರರು ಅಥವಾ ಕುಟುಂಬದ ಸದಸ್ಯರು ಯಾರಾದರೂ ಇದ್ದಲ್ಲಿ, ಹೆಚ್ಚಿನ ಮಾಹಿತಿಗಾಗಿ ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

