ಉಡುಪಿ : ಅಯ್ಯಪ್ಪ ಭಕ್ತವೃಂದ ಅದಿಉಡುಪಿ ಬೈಪಾಸ್ (ರಿ.) ವತಿಯಿಂದ ಈ ಬಾರಿಯ ಮಕರ ಸಂಕ್ರಮಣದ ಶಬರಿಮಲೆ ಯಾತ್ರೆಯ ಅಂಗವಾಗಿ ಹಮ್ಮಿಕೊಳ್ಳಲಿರುವ ಅಯ್ಯಪ್ಪ ಸ್ವಾಮಿ ಶಿಬಿರದ ಪ್ರಥಮ ಕಾರ್ಯಕ್ರಮವಾದ ಚಪ್ಪರ ಮುಹೂರ್ತವು ಅಕ್ಟೋಬರ್ 31ರಂದು ಬೆಳಿಗ್ಗೆ ನಡೆಯಿತು.
ಶಿಬಿರಕ್ಕೆ ಸ್ಥಳಾವಕಾಶ ಒದಗಿಸಿದ ಜಾಗದ ಮಾಲಕರಾದ ಕಂಗಮಾರು ಕೇದಾರನಾಥ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಕೃಷ್ಣ ಅಂಬಲಪಾಡಿ, ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಗೌರೀಶ್ ಕೋಟ್ಯಾನ್, ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.
ಮಕರ ಸಂಕ್ರಮಣದ ಶಬರಿಮಲೆ ಯಾತ್ರೆಯನ್ನು ಸುಸೂತ್ರವಾಗಿ ನಡೆಸುವ ಉದ್ದೇಶದಿಂದ ಶಿಬಿರದ ಸಿದ್ಧತೆಗಳನ್ನು ಆರಂಭಿಸಲಾಗಿದ್ದು, ನವೆಂಬರ್ 16ರಂದು ಶಿಬಿರ ಆರಂಭಗೊಳ್ಳಲಿದೆ.

2027ರ ಜನವರಿ 9ರಂದು ಅಯ್ಯಪ್ಪ ಸ್ವಾಮಿಗೆ ಮಹಾಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.
ಶ್ರದ್ಧಾಭಕ್ತಿ ಹಾಗೂ ಧಾರ್ಮಿಕ ಸಂಪ್ರದಾಯದೊಂದಿಗೆ ನಡೆಯಲಿರುವ ಈ ಶಿಬಿರದಲ್ಲಿ ಅಯ್ಯಪ್ಪ ಭಕ್ತರಿಗೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲು ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸಿದ್ಧತೆ ಕೈಗೊಂಡಿದ್ದಾರೆ.

