ತಾಯಿ ಕೈಯಿಂದ ಜಾರಿ ಬಾವಿಗೆ ಬಿದ್ದು ಮಗು ಸಾವು

0
27


ಉಡುಪಿ: ಕಿನ್ನಿಮೂಲ್ಕಿಯಲ್ಲಿ ಬಾವಿಯಿಂದ ನೀರು ಸೇದುತ್ತಿದ್ದ ವೇಳೆ ಒಂದೂವರೆ ವರ್ಷದ ಮಗು ತಾಯಿಯ ಕೈಯಿಂದ ಜಾರಿ ಬಾವಿಗೆ ಬಿದ್ದು ದಾರುಣವಾಗಿ ಮೃತಪಟ್ಟ ನಡೆದಿದೆ.
ಕೀರ್ತನಾ ಮೃತ ಮಗು. ಕಿನ್ನಿಮೂಲ್ಕಿ ನಿವಾಸಿ ನಯನಾ ಕರ್ಕಡ ಎಂಬವರು ಮಗುವನ್ನು ಎತ್ತಿಕೊಂಡು ಮನೆ ಸಮೀಪದ ಬಾವಿಯಿಂದ ನೀರು ಸೇದುತ್ತಿದ್ದರು. ಈ ವೇಳೆ ಮಗು ಆಯತಪ್ಪಿ ಬಾವಿಗೆ ಬಿದ್ದಿದೆ. ತಕ್ಷಣ ನಯನ ಅವರು ಹಗ್ಗದ ಸಹಾಯದಿಂದ ಬಾವಿಗೆ ಇಳಿದಿದ್ದಾರೆ. ಅಷ್ಟೊತ್ತಿಗೆ ನೀರಿನಲ್ಲಿ ಮುಳುಗಿ ಮಗು ಮೃತಪಟ್ಟಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

LEAVE A REPLY

Please enter your comment!
Please enter your name here