ಮಜಿ ವೀರಕಂಬ ಸರಕಾರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ

0
7

ಕಲ್ಲಡ್ಕ : ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವೆಂಬರ್ 14 ಶನಿವಾರ ಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮಕ್ಕಳು ದೇಶದ ಸಂಪತ್ತು ಸಂಸ್ಕಾರದ ಜೊತೆಗೆ ಶಿಸ್ತು ಮಾನವೀಯತೆ ಸಹಕಾರ ಮತ್ತು ದೇಶಪ್ರೇಮದ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಲ್ಲಿ ಅಡಗಿರುವ ಆತ್ಮವಿಶ್ವಾಸವನ್ನು ಹೊರತಿರುವ ವೇದಿಕೆ ನೀಡುವುದು ಇಂದಿನ ಶಿಕ್ಷಣದ ಉದ್ದೇಶವಾಗಿದೆ, ವಿದ್ಯಾರ್ಥಿಗಳೆಲ್ಲರೂ ನಮ್ಮೆಲ್ಲರ ಕನಸು ಭರವಸೆ ಮತ್ತು ನಾಳಿನ ಭವಿಷ್ಯ ಮುಂದೆ ವಿಜ್ಞಾನಿ ,ಶಿಕ್ಷಕ, ವೈದ್ಯ ,ಕ್ರೀಡಾಪಟು ಅಥವಾ ದೇಶವನ್ನು ಮುನ್ನಡೆಸುವ ನಾಯಕನಿ ಆಗಿರಬಹುದು. ಆದರೆ ಅದಕ್ಕಿಂತ ಮುಖ್ಯವಾಗಿ ಉತ್ತಮ ಮನುಷ್ಯರಾಗಬೇಕು ಎಷ್ಟೇ ಎತ್ತರಕ್ಕೆ ಬೆಳೆದರು ಮಾನವೀಯತೆ ಪ್ರೀತಿ ವಿನಯ ಸಂಸ್ಕಾರವನ್ನು ಎಂದಿಗೂ ಮರೆಯಬಾರದು, ಜೀವನದಲ್ಲಿ ಸ್ವಚ್ಛತೆ ಬಹಳ ಮುಖ್ಯ ಎಂಬ ಮೌಲ್ಯಯುತ ಸಂದೇಶವನ್ನು ಮಿನಿ ಲೈಬ್ರರಿ ರಿಕ್ಷಾ ಖ್ಯಾತಿ ಪಡೆದ ಅದರ ಚಾಲಕ ಮತ್ತು ಮಾಲಕರಾದ ಸುಶಾಂತ್ ಬಿ ಸಿ ರೋಡ್ ರವರು ಮಕ್ಕಳ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಚಿತ್ರಕಲೆ ಮಾನವನ ಭಾವನೆಗಳು, ಕಲ್ಪನೆಗಳು, ಆಲೋಚನೆಗಳು ಮತ್ತು ಅನುಭವಗಳನ್ನು ಬಣ್ಣಗಳ ಮೂಲಕ ವ್ಯಕ್ತಪಡಿಸುವ ಒಂದು ಅದ್ಭುತ ಕಲೆಯಾಗಿದೆ. ಚಿತ್ರಕಲೆ ಕೇವಲ ಬಣ್ಣಗಳನ್ನು ತುಂಬುವ ಕಲೆಯಲ್ಲ ಅದು ಮನಸ್ಸಿನ ಭಾವನೆಗಳಿಗೆ ರೂಪ ನೀಡುವ ಸೃಜನಶೀಲ ಅಭಿವ್ಯಕ್ತಿಯಾಗಿದೆ,
ಚಿತ್ರಕಲೆ ಮನುಷ್ಯನ ಜೀವನದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಮಾತುಗಳಿಂದ ಹೇಳಲಾಗದ ಅನೇಕ ವಿಚಾರಗಳನ್ನು ಒಂದು ಚಿತ್ರ ಸುಲಭವಾಗಿ ವ್ಯಕ್ತಪಡಿಸುತ್ತದೆ. ಪ್ರಕೃತಿಯ ಸೌಂದರ್ಯ, ಮಾನವ ಜೀವನ, ಸಂಸ್ಕೃತಿ, ಸಂಪ್ರದಾಯ, ಹಬ್ಬಗಳು ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಚಿತ್ರಗಳ ಮೂಲಕ ಪರಿಣಾಮಕಾರಿಯಾಗಿ ತೋರಿಸಬಹುದು. ಎಂಬುದಾಗಿ ಚಿತ್ರಕಲಾ ಶಿಕ್ಷಕರಾದ ಟಿಲಾಕ್ಷ ಹಾಗೂ ಕೀತ೯ನಾ ದಂಪತಿಗಳು ರಾಜ್ಯಮಟ್ಟದ ವರ್ಣೋತ್ಸವ 2026 ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಕಲ್ಲಡ್ಕ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ದೈಹಿಕ ಶಿಕ್ಷಕರಾದ ಇಂದುಶೇಖರ್ ಹಾಗೂ ಶಿಕ್ಷಕ ತೌಸೀಫ್ ಅಹ್ಮದ್ ರವರು ಮಕ್ಕಳಿಗೆ ತರಗತಿವಾರು ವಿವಿಧ ಆಟೋಟ ಸ್ಪರ್ಧೆಗಳನ್ನು ನೆರವೇರಿಸಿ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಸಿಹಿ ವಿತರಿಸುವ ಮೂಲಕ ಮಕ್ಕಳ ದಿನಾಚರಣೆಯನ್ನು ಸಂಭ್ರಮಿಸಿದರು.
ಒಟ್ಟಿನಲ್ಲಿ, ಮಕ್ಕಳ ಮನಸ್ಸಿನಲ್ಲಿ ಸಂತೋಷದ ನೆನಪುಗಳನ್ನು ಮೂಡಿಸಿದ ಈ ಮಕ್ಕಳ ದಿನಾಚರಣೆಯು ಕೇವಲ ಆಚರಣೆಯಾಗಿರದೆ, ಮಕ್ಕಳ ಪ್ರತಿಭೆ, ಆತ್ಮವಿಶ್ವಾಸ ಮತ್ತು ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ಸುಂದರ ವೇದಿಕೆಯಾಯಿತು.
ಶಿಕ್ಷಕರು ಹಾಡನ್ನು ರಚಿಸಿ ಹಾಡಿ ಮಕ್ಕಳ ಜೊತೆ ನೃತ್ಯ ಮಾಡುವ ಮೂಲಕ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಸಂಭ್ರಮಿಸಿದರು

ಮುಖ್ಯ ಶಿಕ್ಷಕಿ ಬೆನೆಡಿಕ್ಟಾ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿ, ಹಿರಿಯ ಶಿಕ್ಷಕಿ ಸಂಗೀತ ಶರ್ಮಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಹ ಶಿಕ್ಷಕರು ಸಹಕರಿಸಿದರು