ತುಳು ಲಿಪಿಯ ಸಂಶೋಧನೆ ಮತ್ತು ಸಂರಕ್ಷಣೆಯಲ್ಲಿ ವೆಂಕಟರಾಜ ಪುಣಿಚಿತ್ತಾಯರ ಕೊಡುಗೆ ಸ್ಮರಣೆ

0
1

ವೆಂಕಟರಾಜ ಪುಣಿಚಿತ್ತಾಯರು ಗಡಿನಾಡು ಕಾಸರಗೋಡಿನ ಹಿರಿಯ ವಿದ್ವಾಂಸರು, ಬಹುಭಾಷಾ ಕವಿಗಳು ಹಾಗೂ ತುಳು ಲಿಪಿಯ ಸಂಶೋಧಕರಾಗಿ ಗುರುತಿಸಿಕೊಂಡವರು. ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಪ್ರಾಚೀನ ತುಳು ಲಿಪಿಯ ಅಧ್ಯಯನದ ಬಗ್ಗೆ ಆಸಕ್ತಿ ಹೊಂದಿರುವ ವಿದ್ವಾಂಸರಲ್ಲಿ ಇವರ ಹೆಸರು ಪ್ರಮುಖವಾಗಿ ಉಲ್ಲೇಖಿಸಲ್ಪಡುತ್ತದೆ.
ತುಳು ಭಾಷೆಯ ಐತಿಹಾಸಿಕ ಹಿನ್ನೆಲೆ, ಲಿಪಿಯ ವೈಶಿಷ್ಟ್ಯ ಹಾಗೂ ಭಾಷಾ ಪರಂಪರೆಯ ಬಗ್ಗೆ ಅಧ್ಯಯನ ಮತ್ತು ಅರಿವು ಮೂಡಿಸುವ ಕಾರ್ಯದಲ್ಲಿ ಇವರ ಕೊಡುಗೆ ಮಹತ್ವದ್ದಾಗಿದೆ. ಅಲ್ಲದೇ ವಿಷ್ಣುತುಂಗ ವಿರಚಿತ ‘ಶ್ರೀ ಭಾಗವತೋ’ ತುಳುವಿನ ಮಹಾಕಾವ್ಯ 1984 ಮಂಗಳೂರು ವಿಶ್ವವಿದ್ಯಾನಿಲಯ ಪ್ರಕಟಿಸಿದಾಗ ಅದರಲ್ಲಿ ತುಳು ಲಿಪಿಯನ್ನು ಪ್ರಪ್ರಥಮವಾಗಿ ಲಿಪ್ಯಂತರಗೊಳಿಸಿದ ವಿಷಯ ಇತ್ತು. ನಾನು ಪುಣಿಂಚಿತ್ತಾಯ ಸರ್ ಜೊತೆಗೆ ತುಳು ಲಿಪಿಗಳನ್ನು ತಾಡವಾಲೆಗಳಿಂದ ಭೂತಕನ್ನಡಿ ಹಿಡಿದು ಬರೆದುಕೊಟ್ಟವನೇ ನಾನು. ಇದು ಇಂದಿಗೂ ದಾಖಲೆಯಾಗಿದೆ. ‘ಶ್ರೀ ಭಾಗವತೋ’ ಪುಸ್ತಕದ 41 ಪುಟದಲ್ಲಿ ಗ್ರಂಥದ ಬಗ್ಗೆ ಬರೆದ ನನ್ನ ಸರ್ “ತುಳು ಲಿಪಿ ಅಕ್ಷರಮಾಲೆಯನ್ನು ಅಂದವಾಗಿ ಬರೆದುಕೊಟ್ಟ ಕಲಾವಿದ ಶ್ರೀ ಕೆ ವೆಂಕಟಕೃಷ್ಣ ಭಟ್ಟರಿಗೆ” ಕೃತಜ್ಞತೆಗಳನ್ನು ಎಂದು ಎಂದಿಗೂ ನನ್ನ ಗುರುಗಳು ಆಶೀರ್ವದಿಸಿದ್ದರುಈ ಎಲ್ಲಾ ಸಂದರ್ಭದಲ್ಲಿ ಎಡನೀರು ನೀರು ಮಠದ ಆಶೀರ್ವಾದವು ತನ್ನ ಮೇಲೆ ಇತ್ತು ಎಂದು ಖ್ಯಾತ ವ್ಯಂಗ್ಯ ಚಿತ್ರಗಾರ ವೆಂಕಟ ಬಟ್ ಎರಡನೀರು ಹೇಳಿದರು ಅವರು ಬದಿಯಡ್ಕ ತುಳು ಭವನದಲ್ಲಿ ಸ್ಥಾಪಿಸಲಾದ ತುಳು ಅಕ್ಷರಮಾಲೆಯನ್ನೂ ಪರಿಚಯಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತ ರವಿ ನಾಯ್ಕಾಪು ಬೇಸಿ ಗೋಪಾಲಕೃಷ್ಣ ಭಟ್ ಅನಿತಾ ಟೀಚರ್ ರಾಜೇಶ್ ಮಾಸ್ಟರ್, ಮೊಹಮ್ಮದ್ ಅಲಿ ಪೆರ್ಲ, ವಿಶ್ವ ತುಳುವರೇ ಆಯನ ಮಾಜಿ ಅಧ್ಯಕ್ಷರಾದ ನ್ಯಾಯವಾದಿ ಥೋಮಸ್ ಡಿಸೋಜ, ಪುರುಷೋತ್ತಮ ಭಟ್ ಪೈವಳಿಕೆ, ತಾರನಾಥ ರೈ, ಹರೀಶ್ ಗೋಸಾಡ ಲೀಲಾವತಿ ಕನಕಪ್ಪಾಡಿ, ವಸಂತ ಬಾರಡ್ಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಕುಸುಮ, ರಮೇಶ್ ಮಾವಿನಕಟ್ಟೆ, ಕವಿತಾ ಗಿರೀಶ್ ರೈ, ಸುನಿತಾ, ಸುನಿತಾ ಶಾಂತಕುಮಾರಿ ಜ್ಯೋತಿರ್ಲಕ್ಷ್ಮಿ ಹರೀಶ್ ಗೋಸಾಡ ಪೆರಡಾಲ ಸರಕಾರಿ ಶಾಲೆಯ ಮಕ್ಕಳು ಉಪಸ್ಥಿತರಿದ್ದರು.