ಸ್ವರ್ಗೀಯ ಇರ್ವತ್ತೂರು ಅನಂತ ಭಟ್ ಸಂಸ್ಮರಣೆ: ಅಲಂಗಾರಿನಲ್ಲಿ ಸಾವಯವ ಕೃಷಿ ಜಾಗೃತಿ ಕಾರ್ಯಕ್ರಮ

0
8

ಮೂಡುಬಿದಿರೆ: ಸ್ವರ್ಗೀಯ ಇರ್ವತ್ತೂರು ಅನಂತ ಭಟ್ ಅವರ ಸಂಸ್ಮರಣಾರ್ಥ ವಿಶೇಷ ಕಾರ್ಯಕ್ರಮವನ್ನು ಜೂನ್ 27ರಂದು (ಶನಿವಾರ) ಸಂಜೆ 5 ಗಂಟೆಗೆ ಅಲಂಗಾರಿನ ಅಮೃತ ಸಾವಯವ ಮತ್ತು ಗವ್ಯ ಉತ್ಪನ್ನಗಳ ಮಳಿಗೆ ವಠಾರದಲ್ಲಿ ಆಯೋಜಿಸಲಾಗಿದೆ.

ಅಮೃತ ಸಾವಯವ ಮತ್ತು ಗವ್ಯ ಉತ್ಪನ್ನಗಳ ಮಳಿಗೆ, ಅಲಂಗಾರು ಹಾಗೂ ಸಾವಯವ ಕೃಷಿಕರ ಬಳಗ, ಮೂಡುಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಗೋ ಪೂಜೆ, ಉಚಿತ ಗೋಕೃಪಾಮೃತ ವಿತರಣೆ, ಉಚಿತ ತರಕಾರಿ ಬೀಜ ಹಾಗೂ ಔಷಧೀಯ ಗಿಡಗಳ ವಿತರಣೆ ನಡೆಯಲಿದೆ. ಅಲ್ಲದೆ, ಗೋಆಧಾರಿತ ಸಾವಯವ ಕೃಷಿಯ ಮಹತ್ವ ಕುರಿತ ಮಾಹಿತಿ ಹಾಗೂ ಕಾರ್ಯಾಗಾರವೂ ಏರ್ಪಡಿಸಲಾಗಿದೆ.

ಕಾರ್ಯಕ್ರಮದ ಕೊನೆಯಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಅಮೋಘ ಸಾಧನೆಗೈದ ಯಕ್ಷಗಾನ ಕಲಾವಿದ ಹಾಗೂ ಸಂಘಟಕ ಶಾಂತಾರಾಮ ಕುಡ್ವರ್ ಅವರನ್ನು ಸಾವಯವ ಕೃಷಿಕರ ಬಳಗ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಗುವುದು.

LEAVE A REPLY

Please enter your comment!
Please enter your name here