ಉಡುಪಿ : ಮಳೆಗಾಲದ ಎರಡು ತಿಂಗಳ ಮೀನುಗಾರಿಕೆ ರಜೆ ಪೂರ್ಣಗೊಂಡಿದ್ದು, ಪಶ್ಚಿಮ ಕರಾವಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ಚುರುಕುಗೊಂಡಿದೆ. ಯಾಂತ್ರಿಕೃತ ಮೀನುಗಾರಿಕಾ ಬೋಟುಗಳು ಕಡಲಿಗಿಳಿದಿರುವ ಹಿನ್ನೆಲೆಯಲ್ಲಿ ಉತ್ತಮ ಮೀನುಗಾರಿಕೆ ಹಾಗೂ ಮೀನುಗಾರರ ಸುರಕ್ಷತೆಗಾಗಿ ಪ್ರಾರ್ಥಿಸಿ ಮಲ್ಪೆ ಕಡಲತೀರದಲ್ಲಿ ಶ್ರಾವಣ ಹುಣ್ಣಿಮೆ ಅಂಗವಾಗಿ ಶುಕ್ರವಾರ ಸಮುದ್ರ ಪೂಜೆ ನೆರವೇರಿಸಲಾಯಿತು.
ಬೆಳಗ್ಗೆ ವಡಭಾಂಡ ಬಲರಾಮ ದೇವಸ್ಥಾನದಲ್ಲಿ ಪ್ರಧಾನ ತಂತ್ರಿ ಸುಬ್ರಹ್ಮಣ್ಯ ತಂತ್ರಿ, ಅನುವಂಶಿಕ ಅರ್ಚಕ ಶ್ರೀನಿವಾಸ ಭಟ್ ಅವರು ನೇತೃತ್ವದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಬೊಬ್ಬರ್ಯ ದೈವಕ್ಕೆ ಪೂಜೆ ಸಲ್ಲಿಸಿ ಶೋಭಾಯಾತ್ರೆ ಮೂಲಕ ಸಮುದ್ರತಿರಕ್ಕೆ ತೆರಳಿ, ಗಂಗಾಮಾತೆ ಹಾಗೂ ಸಮುದ್ರರಾಜನಿಗೆ ಲಪುಷ್ಪ ಕ್ಷೀರವನ್ನು ಸಮರ್ಪಿಸಿ ಮೀನುಗಾರರು ಹೇರಳ ಮತ್ಸ್ಯ ಸಂಪತ್ತು ಲಭಿಸುವಂತೆ ಕ್ಷೀರ, ಲ, ಪುಷ್ಪವನ್ನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ಶಾಸಕ ಯಶ್ಪಾಲ್ ಸುವರ್ಣ, ಮೀನುಗಾರಿಕೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ದ.ಕ. ಜಿಲ್ಲಾ ಮೊಗವೀರ ಮಹಾಜನ ಸಂದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮೀನುಗಾರ ಸಂದ ಅಧ್ಯಕ್ಷ ನಾರಾಯಣ ಜೆ. ಕರ್ಕೇರ, ಕಾರ್ಯದರ್ಶಿ ಜಗನ್ನಾಥ ಕಡೆಕಾರ್, ಕೋಶಾಧಿಕಾರಿ ಶಿವಾನಂದ, ಮೀನುಗಾರ ಸಂದ ನಿಕಟಪೂರ್ವ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಮಾಜಿ ಅಧ್ಯಕ್ಷರುಗಳಾದ ಶಿವಪ್ಪ ಕಾಂಚನ್, ಕೇಶವ ಕೋಟ್ಯಾನ್, ಹಿರಿಯಣ್ಣ ಟಿ. ಕಿದಿಯೂರು, ಸತೀಶ್ ಕುಂದರ್, ಕೃಷ್ಣ ಎಸ್. ಸುವರ್ಣ ಮೊದಲಾದವರು ಪಾಲ್ಗೊಂಡಿದ್ದರು.

