ಶಾಲೆಯಲ್ಲಿ ಕಂಪ್ಯೂಟರ್ ಉದ್ಘಾಟನೆ; ಶಿವಪ್ರಸಾದ್ ಅಜಿಲರಿಗೆ ಕೃತಜ್ಞತೆ

0
10

ಅಳದಂಗಡಿ ಶಾಲೆಯಲ್ಲಿ ಶಾಲಾ ಬ್ಯಾಗ್ ಹಾಗೂ ಶೈಕ್ಷಣಿಕ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದೊಂದಿಗೆ, ಈ ಹಿಂದೆ ಶ್ರೀ ಸತ್ಯ ದೇವತಾ ದೇವಸ್ಥಾನದ ವತಿಯಿಂದ ನಡೆದ ಪಠ್ಯಪುಸ್ತಕ ವಿತರಣಾ ಕಾರ್ಯಕ್ರಮದ ಸಂದರ್ಭದಲ್ಲಿ ಶಾಲೆಗೆ ಹಸ್ತಾಂತರಿಸಲಾಗಿದ್ದ ಕಂಪ್ಯೂಟರ್‌ಗಳನ್ನು ಶಾಲೆಯನ್ನು ದತ್ತು ಸ್ವೀಕರಿಸಿರುವ ಶ್ರೀಯುತ ಶಿವಪ್ರಸಾದ್ ಅಜಿಲರು ಶಾಲೆಗೆ ಆಗಮಿಸಿ ಉದ್ಘಾಟಿಸಿದರು.

ಮಕ್ಕಳ ಶೈಕ್ಷಣಿಕ ಪ್ರಗತಿಗೆ ನಿರಂತರವಾಗಿ ಸಹಕಾರ ನೀಡುತ್ತಿರುವ ಶಿವಪ್ರಸಾದ್ ಅಜಿಲರು ಶಾಲೆಯ ಅಭಿವೃದ್ಧಿಗೆ ಹಲವು ರೀತಿಯ ಕೊಡುಗೆಗಳನ್ನು ನೀಡುತ್ತಿದ್ದು, ಪ್ರತಿವರ್ಷ ಶಾಲೆಗೆ ಒಬ್ಬ ಗೌರವ ಶಿಕ್ಷಕರ ವೇತನವನ್ನೂ ಭರಿಸುತ್ತಿದ್ದಾರೆ. ಅವರ ಈ ಶಿಕ್ಷಣಪರ ಸೇವೆ ಹಾಗೂ ಶಾಲೆಯ ಮೇಲಿನ ಕಾಳಜಿಯನ್ನು ಶಾಲಾ ಕುಟುಂಬವು ಕೃತಜ್ಞತೆಯಿಂದ ಸ್ಮರಿಸಿತು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಅಧ್ಯಾಪಕ ವೃಂದ, ವಿದ್ಯಾರ್ಥಿಗಳು ಮತ್ತು ಪೋಷಕರ ಪರವಾಗಿ ಶ್ರೀ ಶಿವಪ್ರಸಾದ್ ಅಜಿಲರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಅವರ ನಿರಂತರ ಸಹಕಾರ ಮತ್ತು ಪ್ರೋತ್ಸಾಹದಿಂದ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣವಾಗುತ್ತಿದ್ದು, ಅವರ ಸೇವೆ ಇತರರಿಗೂ ಮಾದರಿಯಾಗಿದೆ ಎಂದು ಶಾಲಾ ಆಡಳಿತ ಮಂಡಳಿ ಅಭಿಪ್ರಾಯಪಟ್ಟಿತು.

LEAVE A REPLY

Please enter your comment!
Please enter your name here