ಅಳದಂಗಡಿ ಶಾಲಾ ಮಕ್ಕಳಿಗೆ ಶಾಲಾ ಸಾಮಗ್ರಿಗಳ ವಿತರಣೆ

0
10

ಅಳದಂಗಡಿ: ಬೆಂಗಳೂರಿನ ಸರ್ಕಾರೇತರ ಸಂಸ್ಥೆಯಾದ ಯೂತ್‌ ಫರ್‌ ಸೇವಾ ಹಾಗೂ ಅದರೊಂದಿಗೆ ಕೈಜೋಡಿಸಿರುವ Texas Instruments ಸಂಸ್ಥೆಯ ಸಹಯೋಗದಲ್ಲಿ ಅಳದಂಗಡಿಯ ಶಾಲೆಯ ಎಲ್‌ಕೆಜಿ ಯಿಂದ ಎಂಟನೇ ತರಗತಿವರೆಗಿನ 288 ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‌ಗಳು, ಬರೆಯುವ ಪುಸ್ತಕಗಳು, ಕಥೆ ಪುಸ್ತಕಗಳು ಹಾಗೂ ಇತರೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಕಂಪನಿಯ ಸಿಬ್ಬಂದಿಗಳು ಭಾಗವಹಿಸಿದ್ದು, ಅವರನ್ನು ಶಾಲು ಹೊದಿಸಿ, ಪುಷ್ಪ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯನ್ನು ದತ್ತು ಪಡೆದಿರುವ ಹಾಗೂ ಶ್ರೀ ಸತ್ಯ ದೇವತಾ ದೈವಸ್ಥಾನ ಅಳದಂಗಡಿಯ ಮೊಕ್ತೇಸರರಾದ ಶಿವಪ್ರಸಾದ್‌ ಅಜಿಲ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶಶಿಕಾಂತ್‌ ನಾಯಕ್‌, ಉಪಾಧ್ಯಕ್ಷೆ ರೂಪ, ಸದಸ್ಯರಾದ ಆನಂದ್‌ ಪೂಜಾರಿ ಹಾಗೂ ಕಲಾವತಿ, ಮುಖ್ಯ ಶಿಕ್ಷಕಿ Sujatha ಹಾಗೂ ಅಧ್ಯಾಪಕ ವೃಂದ ಉಪಸ್ಥಿತರಿದ್ದರು.

ಹೊಸ ಬ್ಯಾಗ್‌ಗಳು ಮತ್ತು ಶೈಕ್ಷಣಿಕ ಸಾಮಗ್ರಿಗಳನ್ನು ಪಡೆದ ಮಕ್ಕಳು ಸಂತಸದಿಂದ ಸಂಭ್ರಮಿಸಿದರು. ಈ ಸಮಾಜಮುಖಿ ಕಾರ್ಯಕ್ಕೆ ಸಹಕರಿಸಿದ ಸಂಸ್ಥೆಗಳಿಗೂ ಶಾಲೆಯ ಮುಖ್ಯ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಅಧ್ಯಾಪಕ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.

LEAVE A REPLY

Please enter your comment!
Please enter your name here