ಕರುನಾಡ ಕಲ್ಪವೃಕ್ಷ ಫೌಂಡೇಶನ್( ರಿ ) ಚಿತ್ರದುರ್ಗ ಕರ್ನಾಟಕ ಇವರ ವತಿಯಿಂದ ಪ್ರಥಮ ಸಾಹಿತ್ಯ ಕಲ್ಪವೃಕ್ಷೋತ್ಸವ ಹಾಗೂ ನೂತನ ಸಂಸ್ಥೆಯ ಉದ್ಘಾಟನೆಯ ಜೊತೆಗೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಆದ್ದರಿಂದ ಡಿಸೆಂಬರ್ 07 ರಂದು ಭಾನುವಾರ ಹಾವೇರಿಯ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಚಾಮರಾಜನಗರ ತಾಲೂಕಿನ ಹರವೆ ಗ್ರಾಮದ ಸು ಶಿ ಶಾಂತಕುಮಾರ್ ರವರಿಗೆ ಉದಯೋನ್ಮುಖ ಕವಿ ಪ್ರಶಸ್ತಿಯನ್ನು ನೀಡಿ ಅಭಿನಂದಿಸಲಾಗುವುದು , ಎಂದು ಕರುನಾಡ ಕಲ್ಪವೃಕ್ಷ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಕನಕ ಪ್ರೀತೀಶ್ ರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


