ಜನಸೇವೆಯೇ ಜನಾರ್ಧನ ಸೇವೆ ಎಂಬಂತೆ ಆರದಿರಲಿ ಬದುಕು ಆರಾಧನ ತಂಡದ ನವೆಂಬರ್ ತಿಂಗಳ 104 ನೇ ಯೋಜನೆಯ ಸಹಾಯ ಹಸ್ತವನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ತೆಂಕ ಎಡಪದವು ಗ್ರಾಮದ ಬೋರುಗುಡ್ಡೆ ನಿವಾಸಿ ಕಡುಬಡವರಾದ ರಾಘವೇಂದ್ರ ನಾಯ್ಕ್ ಅವರು ಕಿಡ್ನಿ ವೈಫಲ್ಯ ದಿಂದ ಬಳಲುತ್ತಿದ್ದು ಕೆ.ಎಸ್.ಹೆಗ್ಡೆ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇವರ ಕಷ್ಟ ಅರಿತ ನಮ್ಮ ವಾಯ್ಸ್ ಆಪ್ ಆರಾಧನ ತಂಡ ದಿಂದ ಇವರಿಗೆ ಸಹಾಯ ಹಸ್ತ ನೀಡಲಾಯಿತು . ಈ ಸಂದರ್ಭದಲ್ಲಿ ತಂಡದ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ , ಮಹಾನಟಿ ಖ್ಯಾತಿಯ ಆರಾಧನಾ ಭಟ್ ನಿಡ್ಡೋಡಿ ,ಅಭಿಷೇಕ್ ಶೆಟ್ಟಿ ಐಕಳ, ಸಾಣೂರು ಅರುಣ್ ಶೆಟ್ಟಿಗಾರ್, ಸದಸ್ಯರಾದ ದೀನ್ ರಾಜ್ ಬಸವರಾಜ ಮಂತ್ರಿ , ಗಣೇಶ್ ಪೈ ಬಾಸ್ಕರ ದೇವಾಡಿಗ , ಡಾ.ನಾಗರಾಜ ಶೆಟ್ಟಿ ಅಂಬೂರಿ , ಧನಂಜಯ ಶೆಟ್ಟಿ , ನಿಲೇಶ್ ಕಟೀಲು ಪ್ರವೀಣ್ ಬಂಗೇರ ,ಶ್ರೀಕಾಂತ ಭಟ್ ಪೊನ್ನ ಗಿರಿ ,ಪ್ರಭಾಕರ ಮಂಗಳೂರು ,ದಯಾನಂದ ಮಡ್ಕೇಕರ್, ಬೀಮಯ್ಯ ಸುಳ್ಯ , ಅಗರಿ ರಾಘವೇಂದ್ರ ರಾವ್, ಭಾಸ್ಕರ ದೇವಸ್ಯ ದಿನೇಶ್ ಸಿದ್ದಕಟ್ಟೆ , ನಾಗರಾಜ ಸಾಲ್ಯನ್ ಶಾರದಾ ಅಂಚನ್ ರಂಗನಾಥ್ ರಾವ್ ಪಕ್ಷಿಕೆರೆ ಉಪಸ್ಥಿತರಿದ್ದರು.
Home Uncategorized ಕಿಡ್ನಿ ವೈಫಲ್ಯ ದಿಂದ ಬಳಲುತ್ತಿರುವ ರಾಘವೇಂದ್ರ ನಾಯ್ಕ್ ಅವರಿಗೆ ವಾಯ್ಸ್ ಆಪ್ ಆರಾಧನ ತಂಡದಿಂದ...

