ಮೂಡುಬಿದಿರೆ ತಾಲೂಕು ಮಿಜಾರು ಕರ್ನಾಟಕ ಪಬ್ಲಿಕ್ ವಿದ್ಯಾಲಯದಲ್ಲಿ ಜನವರಿ 16 ರಂದು ಗ್ರಾಹಕ ಹಿತರಕ್ಷಣಾ ಮಾಹಿತಿಯನ್ನು ನೀಡಲಾಯಿತು. ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ಸಂಪನ್ಮೂಲ ವ್ಯಕ್ತಿ, ದ.ಕ.ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜೊತೆ ಕಾರ್ಯದರ್ಶಿ ರಾಯಿ ರಾಜ ಕುಮಾರರು ಮಾಹಿತಿದಾರರಾಗಿ ಆಗಮಿಸಿದ್ದರು. ಅವರು ತಮ್ಮ ಭಾಷಣದಲ್ಲಿ ಮಾಹಿತಿ ಹಕ್ಕು ಕಾಯಿದೆ, ಗ್ರಾಹಕ ಹಿತ ರಕ್ಷಣಾ ಕಾಯಿದೆ, ಆಯ್ಕೆ, ಮಾಹಿತಿ, ಇತ್ಯಾದಿ ಹಕ್ಕುಗಳ ಮಾಹಿತಿಯನ್ನು ಹಲವಾರು ಉದಾಹರಣೆಗಳೊಂದಿಗೆ ನೀಡಿದರು. ವಸ್ತುಗಳ ಗುಣಮಟ್ಟ, ದಾಖಲೆ ಇಟ್ಟುಕೊಳ್ಳುವ ಅಗತ್ಯಗಳು, ಆಯೋಗಕ್ಕೆ ದೂರು ನೀಡುವ ವಿಧಾನಗಳ, ಪರಿಹಾರ ಪಡೆಯುವ ಕ್ರಮಗಳು ಬಗೆಗೂ ಮಾಹಿತಿಯನ್ನು ನೀಡಿದರು.
ವಿದ್ಯಾಸಂಸ್ಥೆಯ ಉಪ ಪ್ರಾಂಶುಪಾಲೆ ಪುಷ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರಾಹಕ ಕ್ಲಬ್ ಸಂಯೋಜಕ ಶಿಕ್ಷಕಿ ಜಯಶ್ರೀ , ಇಕೋ ಕ್ಲಬ್ ನ ಸಂಚಾಲಕಿ ಶಿಕ್ಷಕಿ ಪವಿತ್ರ ಕುಮಾರಿ ವೇದಿಕೆಯಲ್ಲಿ ಹಾಜರಿದ್ದರು. ಶಿಕ್ಷಕಿಯರುಗಳಾದ ವಿದ್ಯಾ ಕಾರ್ಯಕ್ರಮ ನಿರ್ವಹಿಸಿದರು. ಅನಿತಾ ಧನ್ಯವಾದ ಸಲ್ಲಿಸಿದರು.


