ಮಿಜಾರು ಕೆ.ಪಿ.ಎಸ್. ಸರಕಾರಿ ಪ್ರಾಥಮಿಕ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಪರಿಸರ ಮಾಹಿತಿ

0
23

ಮೂಡುಬಿದಿರೆಯ ಸುಂದರ ಪರಿಸರದ ಮಿಜಾರು ಕೆ.ಪಿ.ಎಸ್. ಸರಕಾರಿ ಪ್ರಾಥಮಿಕ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಪರಿಸರ ಮಾಹಿತಿಯನ್ನು ಜನವರಿ 16 ರಂದು ನೀಡಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ಸಂಪನ್ಮೂಲ ವ್ಯಕ್ತಿ, ಪತ್ರಕರ್ತ ರಾಯಿ ರಾಜ ಕುಮಾರ್ ಮಾಹಿತಿಯನ್ನು ಹಲವಾರು ಪರಿಸರದ ಸಾಂದರ್ಭಿಕ ಉದಾಹರಣೆಗಳೊಂದಿಗೆ ನೀಡಿದರು. ಗ್ರಾಮೀಣ ವಿದ್ಯಾರ್ಥಿಗಳಿಗೆ ದೊರಕುವ ಸರಕಾರಿ ಸೌಲಭ್ಯಗಳು ಮಾಹಿತಿಯನ್ನೂ ನೀಡಿದರು. ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
ಪ್ರಭಾರ ಮುಖ್ಯ ಶಿಕ್ಷಕಿ ನಾಗರತ್ನ ಶಿರೂರು ಸ್ವಾಗತಿಸಿದರು. ಶಿಕ್ಷಕಿಯರುಗಳಾದ ಗೀತಾ ಕಾರ್ಯಕ್ರಮ ನಿರ್ವಹಿಸಿದರು. ಪ್ರೇಮಾ,ಚೈತ್ರ ಶೆಟ್ಟಿ, ಅನುಪಮ ಕಾರ್ಯಕ್ರಮ ಸಂಘಟಿಸಿದರು. ಹೇಮಾವತಿ ವಂದಿಸಿದರು.

LEAVE A REPLY

Please enter your comment!
Please enter your name here