ಗುರುಸ್ಮರಣೆಯಲ್ಲಿ ಗೋಸೇವೆ : ಉಡುಪಿ ಯುವ ಬ್ರಾಹ್ಮಣ ಪರಿಷತ್‌ನಿಂದ ಹಿಂಡಿ ಕಾಣಿಕೆ

0
42

ಉಡುಪಿ : 1986ರಲ್ಲಿ ಉಡುಪಿ ಜಿಲ್ಲೆಯ ಪ್ರಪ್ರಥಮ ವಿಪ್ರ ಸಂಘಟನೆ ಶಿರೂರು ಮಠದಲ್ಲಿ ಆರಂಭವಾಗಿದ್ದು, ಈ ಮಹತ್ವದ ಕಾರ್ಯಕ್ಕೆ ಕೀರ್ತಿ ಶೇಷರಾದ ಶ್ರೀ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ಕಾರಣಕರ್ತರಾಗಿದ್ದರು.

ಶ್ರೀ ಶ್ರೀ ವೇದಾವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಶುಭ ಅವಸರದಲ್ಲಿ, ಗುರುಗಳ ದಿವ್ಯ ಸ್ಮರಣಾರ್ಥವಾಗಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ.) ಸದಸ್ಯರು ಶ್ರೀ ಕೃಷ್ಣ ಪರಮಾತ್ಮನಿಗೆ ಮತ್ತು ಗೋಮಾತೆಯ ಸೇವಾರ್ಥವಾಗಿ, ಗೋವುಗಳಿಗೆ ಅತ್ಯಂತ ಪ್ರಿಯವಾದ ಹಿಂಡಿಯನ್ನು ಶ್ರದ್ಧಾ–ಭಕ್ತಿಯಿಂದ ಸುಮಾರು 1 ಲಕ್ಷ ರೂ. ಮೊತ್ತದ ಹೊರೆ ಕಾಣಿಕೆಯಾಗಿ ಅರ್ಪಿಸಿದರು. ಈ ಪುಣ್ಯ ಕಾರ್ಯವು ತುಷಿಮಾಮ ಇವರ ಸಹಕಾರದೊಂದಿಗೆ ಭಕ್ತಿಭಾವದಿಂದ ನೆರವೇರಿತು.

ಈ ಸಂದರ್ಭದಲ್ಲಿ ರಘುಪತಿ ರಾವ್, ರವೀಂದ್ರ ಆಚಾರ್, ಅಮಿತಾ ಕ್ರಮದಾರಿ, ಜಯರಾಮ್ ಆಚಾರ್, ಚಂದ್ರಕಾಂತ್ ಕೆ.ಎನ್., ನಾಗರಾಜ್ ತಂತ್ರಿ, ಶಶಿಧರ್ ಭಟ್, ಚೈತನ್ಯ ಎಂ.ಜಿ., ಶ್ರೀನಿವಾಸ್ ಯು.ಬಿ., ವಿಜಯ್ ಕಡೆಕಾರ್, ರಂಜನ್ ಕಲ್ಕೂರ್, ಭಾಸ್ಕರ್ ರಾವ್ (ಕೆಡಿಯೂರು), ವಿಜಯ್ ರಾಘವ್ ರಾವ್, ಎಂ.ಎಸ್. ವಿಷ್ಣು, ಮಂಜುನಾಥ್ ರಾವ್ ವೈ., ಪದ್ಮ ವಿಷ್ಣು, ದಿವ್ಯಾ ಪಾಡಿಗಾರ್, ಸುಮನಾ ಕಕ್ಕುಂಜೆ, ಸುಮಿತ್ರಾ ಕೆರೇಮಠ, ಆಶಾ ರಘುಪತಿ ರಾವ್, ಉಷಾ ಹೆಬ್ಬಾರ್, ರವಿ ಪ್ರಕಾಶ್, ರಂಗನಾಥ್ ಸಮಗಾ, ವಿಷ್ಣು ಪ್ರಸಾದ್ ಪಾಡಿಗಾರ್ ಹಾಗೂ ಬೈಕಾಡಿ ಸುಪ್ರಸಾದ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here